LatestLeading NewsMain PostNational

ಎರಡು ಕ್ವಾರ್ಟರ್ ಕುಡಿದ್ರೂ ನಶೆಯೇರುತ್ತಿಲ್ಲ- ಗೃಹ ಸಚಿವರಿಗೆ ಕುಡುಕ ದೂರು

ಭೋಪಾಲ್: ಕುಡಕನೊಬ್ಬ ಎರಡು ಕ್ವಾರ್ಟರ್ ಕುಡಿದರೂ ನಶೆಯೇರುತ್ತಿಲ್ಲ ಎಂದು ಗೃಹ ಸಚಿವರಿಗೆ ಹಾಗೂ ಅಬಕಾರಿ ಸಚಿವರಿಗೆ ದೂರು ನೀಡಿದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಉಜ್ಜಯಿನಿಯ ಬಹದ್ದೂರ್ ಗಂಜ್‍ನಲ್ಲಿರುವ ಆರ್ಯ ಸಮಾಜ ಮಾರ್ಗದಲ್ಲಿ ವಾಸಿಸುವ ಲೋಕೇಂದ್ರ ಸೋಥಿಯಾ ಮದ್ಯಕ್ಕೆ ದಾಸನಾಗಿದ್ದ. ಈತ ಏಪ್ರಿಲ್ 12ರಂದು ಇಂದೋರ್‌ನಲ್ಲಿ ಸ್ಥಳೀಯ ಮದ್ಯದ ಅಂಗಡಿಯಿಂದ 4 ಕ್ವಾರ್ಟರ್ ದೇಸಿ ಮದ್ಯವನ್ನು ಖರೀದಿಸಿದ್ದ. ಎರಡು ಕ್ವಾರ್ಟರ್ ಕುಡಿದರೂ ಆತನಿಗೆ ಅಮಲು ಏರಲಿಲ್ಲವಾಗಿತ್ತು. ಇದರಿಂದಾಗಿ ಆತನಿಗೆ ಗುತ್ತಿಗೆದಾರರು ಮದ್ಯದ ಬದಲು ನೀರು ಹಾಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರಿಗೆ ದೂರು ನೀಡಲು ಮದ್ಯದಂಗಡಿಗೆ ತೆರಳಿದ್ದಾನೆ. ಆಗ ಅಲ್ಲಿದ್ದ ನೌಕರರು ಆತನಿಗೆ ಬೈದು ಅಲ್ಲಿಂದ ಓಡಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಲೋಕೇಂದ್ರ ಮದ್ಯದ ಗುತ್ತಿಗೆದಾರರ ವಿರುದ್ಧ ಗೃಹ ಸಚಿವ ನರೋತ್ತಮ್ ಮಿಶ್ರಾ ಹಾಗೂ ಅಬಕಾರಿ ಇಲಾಖೆಗೆ ದೂರ ನೀಡಿದ್ದಾನೆ.

ಪತ್ರದಲ್ಲಿ ಏನಿದೆ?: ಎರಡು ಕ್ವಾರ್ಟರ್ ಕುಡಿದರೂ ನಶೆಯೇ ಏರುತ್ತಿಲ್ಲ. ಇದರಿಂದಾಗಿ ಗುತ್ತಿಗೆದಾರರು ಮದ್ಯದಲ್ಲಿ ನೀರು ಬೇರೆಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ತನ್ನ ಬಳಿ ಎರಡು ಸೀಲ್ಡ್ ಕ್ವಾರ್ಟರ್‌ಗಳಿವೆ. ಇವುಗಳನ್ನು ಲ್ಯಾಬ್‍ನಲ್ಲಿ ಪರಿಶೀಲನೆ ನಡೆಸಿದರೆ ಮದ್ಯದಲ್ಲಿ ನೀರು ಬೆರೆಸಲಾಗಿದೆಯೇ ಎಂಬುದು ಗೊತ್ತಾಗಲಿದೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾನೆ.

ಆದರೆ, ಈ ಪ್ರಕರಣದಲ್ಲಿ ಅಬಕಾರಿ ಅಧಿಕಾರಿ ರಾಮ್ ಹನ್ಸ್ ಪಚೌರಿ ಅವರು ಇನ್ನೂ ದೂರು ಸ್ವೀಕರಿಸಿಲ್ಲ, ನಂತರ ತನಿಖೆ ನಡೆಸಲಾಗುವುದು ಎಂದು ಹೇಳಿದ್ದರು. ಆದರೆ, ಮೇ 6ರವರೆಗೆ ಅವರ ದೂರಿನ ಮೇರೆಗೆ ಏನೂ ಆಗಿಲ್ಲ, ಆದ್ದರಿಂದ ಅಸಮಾಧಾನಗೊಂಡ ಲೋಕೇಂದ್ರ ಗ್ರಾಹಕರ ವೇದಿಕೆಗೆ ಹೋಗುವುದಾಗಿ ತಿಳಿಸಿದರು. ಇದನ್ನೂ ಓದಿ: ಉಕ್ರೇನ್‌ಗೆ ಬ್ರಿಟನ್‌ನಿಂದ ಮತ್ತೆ 12 ಸಾವಿರ ಕೋಟಿ ಮಿಲಿಟರಿ ನೆರವು

ಕುಡುಕರಿಗೆ ನ್ಯಾಯ ಬೇಕು. ನಾನು ಎರಡು ದಶಕಗಳಿಂದ ಕುಡಿಯುತ್ತಿದ್ದೇನೆ ಮತ್ತು ಮದ್ಯದಲ್ಲಿ ಕಲಬೆರಕೆ ಇದೆ ಎಂದು ನನಗೆ ಶೀಘ್ರದಲ್ಲೇ ಅರಿವಾಯಿತು ಎಂದು ಹೇಳಿದ್ದಾನೆ. ಇದನ್ನೂ ಓದಿ: ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾಗೆ ಸದ್ಯಕ್ಕಿಲ್ಲ ಬಂಧನ

Leave a Reply

Your email address will not be published.

Back to top button