ಲಂಡನ್: ಬರೋಬ್ಬರಿ 2 ಲಕ್ಷ ಕ್ಯಾಡ್ಬರಿ ಕ್ರೀಮ್ ಎಗ್ ಚಾಕೊಲೇಟ್ಗಳನ್ನು (Chocolate Eggs) ಕಳ್ಳತನ ಮಾಡಿದ್ದ ಆರೋಪಿಯನ್ನು ಹಿಡಿದು ಪೊಲೀಸರು ಜೈಲಿಗಟ್ಟಿದ್ದಾರೆ.
ಜೋಬಿ ಪೂಲ್ (32) ಜೈಲು ಪಾಲಾದ ಆರೋಪಿ. ಈತ ಟೆಲ್ಫೋರ್ಡ್ ಕೈಗಾರಿಕಾ ಘಟಕಕ್ಕೆ ನುಗ್ಗಿ 30.63 ಲಕ್ಷ ರೂ. ಮೌಲ್ಯದ ಚಾಕೊಲೇಟ್ಗಳನ್ನು ಕಳ್ಳತನ ಮಾಡಿದ್ದ. ಕಳ್ಳನಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೆನಡಾದ ರಾಮಮಂದಿರದಲ್ಲಿ ಭಾರತ ವಿರೋಧಿ ಬರಹ- ಕ್ರಮ ತೆಗೆದುಕೊಳ್ಳಲು ಆಗ್ರಹ
ಜೋಬಿ ಈ ಮೊದಲೇ ಕಳ್ಳತನ ಮಾಡಿದ್ದ ಲಾರಿ ಕ್ಯಾಬ್ ಬಳಸಿ ಮತ್ತೊಂದು ಕಳ್ಳತನ ಮಾಡಿದ್ದಾನೆ. ಇದು ಸಂಘಟಿತ ಅಪರಾಧ ವಿಷಯವಾಗಿದೆ ಎಂದು ಕಳ್ಳನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಈತ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದಾಗ ವಿಷಯ ತಿಳಿದು ಪೊಲೀಸರು ಬೆನ್ನಟ್ಟಿದ್ದಾರೆ. ತನ್ನನ್ನು ಹಿಂಬಾಲಿಸುತ್ತಿರುವುದನ್ನು ಅರಿತ ಆತ ವಾಹನವನ್ನು ನಿಲ್ಲಿಸಿದ್ದಾನೆ. ಆತ ಕದ್ದಿದ್ದ ಚಾಕೊಲೇಟ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವುಗಳನ್ನು ಮಾಲೀಕರಿಗೆ ತಲುಪಿಸುವ ಕಾರ್ಯ ಮಾಡತ್ತಿದ್ದಾರೆ. ಇದನ್ನೂ ಓದಿ: ಟರ್ಕಿ, ಸಿರಿಯಾ ಭೂಕಂಪ- ಸಾವಿನ ಸಂಖ್ಯೆ 41 ಸಾವಿರಕ್ಕೆ ಏರಿಕೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k