ಮುಂಬೈ: ಎಚ್ಚೆತ್ತ ರೈಲು ಚಾಲಕ ಸಮಯಕ್ಕೆ ಸರಿಯಾಗಿ ತುರ್ತು ಬ್ರೇಕ್ಗಳನ್ನು ಎಳೆದಿದ್ದು, ವ್ಯಕ್ತಿಯೊಬ್ಬ ಅದೃಷ್ಟವಶಾತ್ ಕೆಲವೇ ಸೆಕೆಂಡಿನಲ್ಲಿ ಸಾವಿನಿಂದ ಪಾರಾದ ಘಟನೆಯು ಮುಂಬೈನ ಶಿವಡೀ ಸ್ಟೇಷನ್ನಲ್ಲಿ ನಡೆದಿದೆ.
मोटरमैन द्वारा किया गया सराहनीय कार्य : मुंबई के शिवड़ी स्टेशन पर मोटरमैन ने देखा कि एक व्यक्ति ट्रैक पर लेटा है उन्होंने तत्परता एवं सूझबूझ से इमरजेंसी ब्रेक लगाकर व्यक्ति की जान बचाई।
आपकी जान कीमती है, घर पर कोई आपका इंतजार कर रहा है। pic.twitter.com/OcgE6masLl
— Ministry of Railways (@RailMinIndia) January 2, 2022
Advertisement
ಶಾಕಿಂಗ್ ವೀಡಿಯೋವೊಂದನ್ನು ರೈಲ್ವೆ ಸಚಿವಾಲಯ ಟ್ವಿಟ್ಟರ್ನಲ್ಲಿ ಹರಿಬಿಟ್ಟಿದೆ. ವ್ಯಕ್ತಿಯೊಬ್ಬ ರೈಲ್ವೇ ಹಳಿಗಳ ಮೇಲೆ ಆಕಸ್ಮಿಕವಾಗಿ ಅಡ್ಡಾಡುತ್ತಿದ್ದು. ರೈಲು ಸಮೀಪಿಸುತ್ತಿದ್ದಂತೆ, ವ್ಯಕ್ತಿ ಇದ್ದಕ್ಕಿದ್ದಂತೆ ಹಳಿಗಳ ಮೇಲೆ ಮಲಗಿದ್ದಾನೆ. ಇದನ್ನೂ ಕಂಡ ಲೊಕೊ ಪೈಲಟ್ ತುರ್ತು ಬ್ರೇಕ್ಗಳನ್ನು ಎಳೆದಿದ್ದು, ರೈಲು ತಕ್ಷಣವೇ ನಿಂತಿದೆ. ಕೆಲವು ಆರ್ಪಿಎಫ್ ಸಿಬ್ಬಂದಿ ಆ ವ್ಯಕ್ತಿಯನ್ನು ಸುರಕ್ಷಿತವಾಗಿ ಕರೆದೊಯ್ಯಲು ಅವನ ಕಡೆಗೆ ಧಾವಿಸುತ್ತಿರುವುದನ್ನು ವೀಡಿಯೋದಲ್ಲಿ ನೀವು ಕಾಣಬಹುದಾಗಿದೆ. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ
Advertisement
ಲೊಕೊ ಪೈಲಟ್ ಮಾಡಿದ ಶ್ಲಾಘನೀಯ ಕೆಲಸ:
ಮುಂಬೈನ ಶಿವಡಿ ನಿಲ್ದಾಣದಲ್ಲಿ, ಅವರು ಟ್ರ್ಯಾಕ್ನಲ್ಲಿ ಒಬ್ಬ ವ್ಯಕ್ತಿ ಬಿದ್ದಿರುವುದನ್ನು ನೋಡಿದ್ದಾರೆ. ಅವರು ತುರ್ತು ಬ್ರೇಕ್ ಅನ್ನು ತ್ವರಿತವಾಗಿ ಮತ್ತು ತಿಳುವಳಿಕೆಯಿಂದ ಹಾಕಿದ್ದು, ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಿದ್ದಾರೆ. ಇದನ್ನೂ ಓದಿ: ‘ಫಿಟ್ ಇಂಡಿಯಾ’ ಬಗ್ಗೆ ಅರಿವು ಮೂಡಿಸಲು ಜಿಮ್ನಲ್ಲಿ ವರ್ಕೌಟ್ ಮಾಡಿದ ಮೋದಿ
Advertisement
ವೀಡಿಯೋಗೆ ರೈಲ್ವೇ ಸಚಿವಾಲಯವು, ನಿಮ್ಮ ಜೀವವು ಅಮೂಲ್ಯವಾಗಿದೆ, ನಿಮ್ಮ ಮನೆಯಲ್ಲಿ ನಿಮಗಾಗಿ ಕಾಯುತ್ತಿದ್ದಾರೆ ಎಂದು ಶೀರ್ಷಿಕೆ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವೀಡಿಯೋವು 83,000 ವೀಕ್ಷಣೆಗಳನ್ನು ಪಡೆದಿದ್ದು, ಸಾಕಷ್ಟು ನೆಟ್ಟಿಗರಿಂದ ಲೊಕೊ ಪೈಲಟ್ಗೆ ಶ್ಲಾಘನೆಯ ಮಹಾಪುರವೆ ಹರಿದು ಬಂದಿದೆ.
Advertisement