ತಿರುವನಂತನಪುರಂ: ಕೇರಳದ (Kerala) ಜನಪ್ರಿಯ ಲುಲು ಮಾಲ್‍ನಲ್ಲಿ ಮಹಿಳೆಯಂತೆ ಬುರ್ಖಾ ಧರಿಸಿ ಮಹಿಳೆಯರ ವಾಶ್‍ರೂಮ್‍ಗೆ ತೆರಳಿ ಕ್ಯಾಮೆರಾ ಇರಿಸಿದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.
ಆರೋಪಿ 23 ವರ್ಷದ ಐಟಿ ಉದ್ಯೋಗಿಯಾಗಿದ್ದಾನೆ. ಆರೋಪಿ ಮೊಬೈಲ್ (Mobile) ಫೋನ್‍ನಲ್ಲಿ ವೀಡಿಯೋ ರೆಕಾರ್ಡ್ ಮಾಡಿದ್ದಾನೆ. ಆತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66 ಇ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ ವಿಡಿಯೋ ಚಿತ್ರೀಕರಣ ಕೇಸ್ – ವಿದ್ಯಾರ್ಥಿನಿಯರು, ಕಾಲೇಜ್ ವಿರುದ್ಧ ಎಫ್‌ಐಆರ್ ದಾಖಲು
Advertisement
Advertisement
ಆರೋಪಿ ತನ್ನ ಫೋನ್‍ನ್ನು ಸಣ್ಣ ರಟ್ಟಿನ ಬಾಕ್ಸ್‌ನಲ್ಲಿ ಇರಿಸಿದ್ದ. ದೃಶ್ಯಗಳನ್ನು ರೆಕಾರ್ಡ್ ಮಾಡಲು ಕ್ಯಾಮೆರಾ ಬಳಿ ರಂಧ್ರ ಮಾಡಿ ಅದನ್ನು ವಾಶ್ ರೂಂನ ಬಾಗಿಲಿಗೆ ಅಂಟಿಸಿದ್ದ. ಬಳಿಕ ಆತ ಬಾಗಿಲಿನ ಮುಂದೆ ನಿಂತಿದ್ದ. ಆತನ ಅನುಮಾನಾಸ್ಪದ ವರ್ತನೆಯ ಮೇಲೆ ಮಾಲ್‍ನ ಭದ್ರತಾ ಸಿಬ್ಬಂದಿ ವಿಚಾರಿಸಿದ್ದಾರೆ. ಬಳಿಕ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
Advertisement
Advertisement
ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ (Court) ಹಾಜರುಪಡಿಸಲಾಗಿದ್ದು, ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಈ ಹಿಂದೆ ಈ ರೀತಿಯ ಕೃತ್ಯ ಎಸಗಿರುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ ಮಾದರಿ ಮತ್ತೊಂದು ಕೇಸ್; ಹಾಸ್ಟೆಲ್ ಹುಡ್ಗೀರ ಬೆತ್ತಲೆ ವೀಡಿಯೋ ಸೆರೆ ಹಿಡಿದು ಸೀನಿಯರ್‌ಗೆ ಕಳಿಸ್ತಿದ್ದ ವಿದ್ಯಾರ್ಥಿನಿ
Web Stories