ಭೋಪಾಲ್: ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಸಿಂಹಗಳಿರುವ ಆವರಣಕ್ಕೆ ಹೋಗಿ ದುರಂತಕ್ಕೀಡಾದ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್ (Sri Venkateswara Zoological Park) ನಲ್ಲಿ ಇಂದು ನಡೆದಿದೆ.
ವ್ಯಕ್ತಿಯನ್ನು ಪ್ರಹ್ಲಾದ್ ಗುಜ್ಜರ್ (34) ಎಂದು ಗುರುತಿಸಲಾಗಿದೆ. ಈತ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬನ್ಸೂರ್ ಪುರಸಭೆಯ ನಿವಾಸಿ. ಈತ ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಸೆಲ್ಫಿ (Selfie With Lion) ತೆಗೆದುಕೊಳ್ಳಲು ಸಿಂಹಗಳ ಆವರಣಕ್ಕೆ ನುಗ್ಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ವ್ಯಕ್ತಿಯನ್ನು ತಿಂದಿಲ್ಲ: ನಿರ್ವಾಹಕರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಮಾತ್ರ ಪ್ರವೇಶಿಸಬಹುದಾದ ಜಾಗದಿಂದ ಪ್ರವೇಶ ಕೊಟ್ಟಿದ್ದಾನೆ. ಝೂನಲ್ಲಿರುವ ಪ್ರಾಣಿ ಪಾಲಕರು ಗುಜ್ಜರ್ ನಿರ್ಬಂಧಿತ ಸ್ಥಳದಲ್ಲಿ ಪ್ರವೇಶಿಸುವುದನ್ನು ಗಮನಿಸಿ ಎಚ್ಚರಿಕೆ ನೀಡಿದರೂ ಆತ ಕ್ಯಾರೇ ಎಂದಿಲ್ಲ. 6 ಅಡಿ ಎತ್ತರದ ಬೇಲಿಯನ್ನು ದಾಟಿ ಸಿಂಹಗಳ ಆವರಣಕ್ಕೆ ಹಾರಿದ್ದಾನೆ. ಈ ವೇಳೆ ಸಿಂಹ (Lion Attack) ಆತನ ಮೇಲೆ ದಾಳಿ ಮಾಡಿದೆ. ದೇಹದ ಯಾವುದೇ ಭಾಗವನ್ನು ತಿನ್ನಲಿಲ್ಲ. ಆದರೆ ಗಂಭೀರ ಗಾಯಗೊಂಡ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಮೃಗಾಲಯದ ಕ್ಯೂರೇಟರ್ ಸಿ ಸೆಲ್ವಂ ತಿಳಿಸಿದ್ದಾರೆ. ಇದನ್ನೂ ಓದಿ: ‘ಕರಿಮಣಿ ಮಾಲೀಕ ನೀನಲ್ಲ’- ಪತ್ನಿ ರೀಲ್ಸ್‌ನಿಂದ ಬೇಸತ್ತು ಪತಿ ಸೂಸೈಡ್
Advertisement
Advertisement
ಕೇರ್‌ಟೇಕರ್ ಸ್ಥಳಕ್ಕೆ ದೌಡಾಯಿಸುವ ಮುನ್ನವೇ ಗುಜ್ಜರ್‌ನನ್ನು ‘ಡೊಂಗಲ್‌ಪುರ’ ಎಂಬ ಸಿಂಹವು ಕೊಂದು ಹಾಕಿದೆ. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಘಟನೆಯ ಸಮಯದಲ್ಲಿ ಗುಜ್ಜರ್ ಮದ್ಯದ ಅಮಲಿನಲ್ಲಿದ್ನೋ ಎಂದು ಖಚಿತಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ದಾಳಿಯ ಬಳಿಕ ಸಿಂಹದ ಆವರಣಕ್ಕೆ ಬೀಗ ಹಾಕಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.
ಘಟನೆಯ ಬಳಿಕ ವ್ಯಕ್ತಿಯ ಗುರುತು ಪತ್ತೆಗೆ ಸಿಂಹದ ಆವರಣ ಹುಡುಕಾಡಿದಾಗ ವ್ಯಕ್ತಿಯ ಪರ್ಸ್ ಪತ್ತೆಯಾಗಿದೆ. ಅದರಲ್ಲಿ ಆಧಾರ್ ಕಾರ್ಡ್ ಹಾಗೂ ಗುರುತಿನ ಚೀಟಿ ಪತ್ತೆಯಾಗಿದೆ. ಬಳಿಕ ಸಿಬ್ಬಂದಿ ವ್ಯಕ್ತಿಯ ಕುಟುಂಬವನ್ನು ಸಂಪರ್ಕಿಸಿದ್ದಾರೆ.