ಮಂಗಳೂರು: ಮದುವೆ ಮನೆ ಎಂದರೆ ಪರಸ್ಪರ ಮಾತು, ನಗು, ಮಕ್ಕಳ ಹರಟೆ ಎಲ್ಲವೂ ಇರುತ್ತೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮದುವೆ ಹಾಲ್ ನಲ್ಲಿ ಮಾತ್ರ ಮೋದಿ ಅವರ ಮನ್ ಕೀ ಬಾತ್ ಕೇಳಿಸುತಿತ್ತು.
ಹೌದು. ಸುಳ್ಯ ತಾಲೂಕಿನ ಬಿಜೆಪಿ ಕಾರ್ಯಕರ್ತ ಜಯರಾಮ ಅವರು ಪ್ರಧಾನಿ ನರೇಂದ್ರ ಮೋದಿಯವರ 53ನೇ ಮನದ ಮಾತು ಕೇಳುತ್ತಲೇ ಗ್ರಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ. ಭಾನುವಾರ ಸುಳ್ಯ ನಗರದ ಮಹಾವಿಷ್ಣು ದೇವಸ್ಥಾನ ಕಾಯರ್ತೋಡಿಯಲ್ಲಿ ಜಯರಾಮ ಹಸೆಮಣೆ ಏರಿದ್ದರು.
ಮೋದಿಯ ಮನ್ ಕೀ ಬಾತ್ ದಿನವಾಗಿದ್ದರಿಂದ ಮದುವೆಗೆ ಆಗಮಿಸಿದ್ದ ಜನರಿಗೆ ಮೋದಿಯ ರೇಡಿಯೋ ಮಾತು ಕೇಳುವಂತೆ ವ್ಯವಸ್ಥೆ ಮಾಡಿದ್ದರು. 11.30ರ ವೇಳೆಗೆ ಧಾರಾ ಮುಹೂರ್ತದಲ್ಲಿ ಮದುವೆಯಾದ ಜಯರಾಮ, ಅತ್ತ ಮೋದಿ ಮಾತು ಕೇಳುತ್ತಲೇ ಹಸೆಮಣೆ ತುಳಿದಿದ್ದಾರೆ.
ನವ ವಧುವರರು ಪ್ರಧಾನಿ `ಮನ್ ಕಿ ಬಾತ್’ ಆಲಿಸಲು ಮಂಟಪ ಬಿಟ್ಟು ರೇಡಿಯೋ ಬಳಿ ಬಂದು ಸೇರಿದ ಎಲ್ಲ ಬಂಧುಗಳೊಂದಿಗೆ ಕುಳಿತು ಮೋದಿಯ ಮನದ ಮಾತಿಗೆ ಸಾಕ್ಷಿಗಳಾದರು. ಮನದ ಮಾತು ಕೇಳಿಸುವುದಕ್ಕಾಗಿ ವಿಶೇಷವಾಗಿ ರೇಡಿಯೋ ಮತ್ತು ಸ್ಪೀಕರ್ ವ್ಯವಸ್ಥೆ ಮಾಡಿದ್ದರು. ಸೇರಿದ ನೂರಾರು ಬಂಧು ಮಿತ್ರರು ಒಂದೆಡೆ ಕೂತು ಮನದ ಮಾತನ್ನು ಆಲಿಸಿ ನವ ಜೋಡಿಯನ್ನು ಆಶೀರ್ವದಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv