ಮುಂಬೈ: ವ್ಯಕ್ತಿಯೊಬ್ಬ ಫ್ಲ್ಯಾಟ್ಗೆ ನುಗ್ಗಿ ಮಲಗಿದ್ದ ಮಹಿಳೆಗೆ ಕಿರುಕುಳ ನೀಡಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕೃತ್ಯ ಸಿವಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಂಧಿತನನ್ನು ಭವಿನ್ ಷಾ ಎಂದು ಗುರುತಿಸಲಾಗಿದೆ. ಆರೋಪಿ ಫುಡ್ ಡೆಲಿವರಿಯಾಗಿ ಕೆಲಸ ಮಾಡುತ್ತಿದ್ದಾನೆ ಎಂದು ನವರಂಗಪುರ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.
ಆರೋಪಿ ಭವಿನ್ ಷಾ ಜೂನ್ 14 ರಂದು ಮಧ್ಯರಾತ್ರಿ ನವರಂಗಪುರ ಪ್ರದೇಶದ ಕಮಲ್ ನಯನ್ ಅಪಾರ್ಟ್ಮೆಂಟ್’ನಲ್ಲಿರುವ ಫ್ಲ್ಯಾಟ್ಗೆ ನುಗ್ಗಿದ್ದಾನೆ. ಅಲ್ಲಿ ಮಹಿಳೆಯಿದ್ದ ಫ್ಲ್ಯಾಟ್ನ ಬಾಗಿಲು ಲಾಕ್ ಆಗಿರಲಿಲ್ಲ. ಇದನ್ನು ಗಮನಿಸಿದ ಆರೋಪಿ ಏಕಾಏಕಿ ಫ್ಲ್ಯಾಟ್ ಒಳಗೆ ನುಗ್ಗಿದ್ದಾನೆ. ಮಹಿಳೆ ಡ್ರಾಯಿಂಗ್ ರೂಮಿನಲ್ಲಿ ಸೋಫಾದ ಮೇಲೆ ಮಲಗಿದ್ದರು. ಆರೋಪಿ ಆಕೆಯ ಬಳಿ ಹೋಗಿ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ. ವಿಡಿಯೋದಲ್ಲಿ ಆರೋಪಿ ಮಹಿಳೆಯ ಮೈಮುಟ್ಟಿರುವುದು ಸ್ಪಷ್ಟವಾಗಿ ಸೆರೆಯಾಗಿದೆ.
ಇನ್ನೊಬ್ಬ ಮಹಿಳೆ ಆತ ಫ್ಲ್ಯಾಟ್ಗೆ ಹೋಗಿರುವುದನ್ನು ಗಮನಿಸಿ ಕೂಗಿಕೊಂಡಿದ್ದಾರೆ. ಆಗ ಆರೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಸಿಸಿಟಿವಿ ವಿಡಿಯೋ ಆಧಾರದ ಮೇರೆಗೆ ಅಪರಿಚಿತ ವ್ಯಕ್ತಿಯ ಮೇಲೆ ಐಪಿಸಿ ಸೆಕ್ಷನ್ ವಿಭಾಗಗಳಿಗೆ ಸಂಬಂಧಿಸಿದ ಕಾಯ್ಡೆಯಡಿ ಎಫ್ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದೇವೆ. ಬಳಿಕ ಸಿಸಿಟಿವಿಯ ಮೂಲಕ ಆರೋಪಿ ಪತ್ತೆಯಾಗಿದ್ದು, ಬಂಧಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಪಿಜಿ(ಪೇಯಿಂಗ್ ಗೆಸ್ಟ್) ಮಾಲೀಕರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಒಂದು ವೇಳೆ ಆರೋಪ ಕೇಳಿ ಬಂದರೆ ಆತನ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ. ಸಂತ್ರಸ್ತೆ ಫ್ಲ್ಯಾಟ್ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಹಿಳೆ ಮೊದಲಿಗೆ ದೂರು ನೀಡಲು ಒಪ್ಪಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದು ರಾಜ್ಯ ಮಹಿಳಾ ಆಯೋಗದ ತಂಡವು ಅಪಾರ್ಟ್ ಮೆಂಟ್ಗೆ ಭೇಟಿ ನೀಡಿತ್ತು. ಅಲ್ಲಿ ಅಧ್ಯಕ್ಷೆ ಲೀಲಾ ಅಂಕೋಲಿಯಾ, ಈ ಘಟನೆ ಅತ್ಯಂತ ಆತಂಕಕಾರಿಯಾಗಿದೆ. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ಹಾಸ್ಟೆಲ್ನ ಆಡಳಿತ ಮಂಡಳಿ ಕಾಳಜಿ ವಹಿಸಬೇಕು ಎಂದು ಹೇಳಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]