ಚೆನ್ನೈ: ಪ್ರವಾಹಕ್ಕೆ ಸಿಲುಕಿದ ಚೆನ್ನೈನ (Chennai) ಎಟಿಎಂ ಬಳಿ ವಿದ್ಯುತ್ ಪ್ರವಹಿಸಿ ವ್ಯಕ್ತಿಯ ಶವ ತೇಲುತ್ತಿರುವುದು ಪತ್ತೆಯಾಗಿದೆ.
ಮೃತದೇಹವೊಂದು ತೇಲುತ್ತಿತ್ತು. ಕೆಲವರು ಮೃತದೇಹವನ್ನು ಮರದ ಕಂಬದಿಂದ ದೂಡಿದರು. ನಂತರ ಚೆನ್ನೈನ ಎಟಿಎಂನ ಹೊರಗೆ ಪ್ರವಾಹದ ನೀರಿನಿಂದ ದೇಹವನ್ನು ಹೊರತೆಗೆಯಲಾಯಿತು. ಈ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: Cyclone Fengal | ಚೆನ್ನೈ ಏರ್‌ಪೋರ್ಟ್‌ನಿಂದ 13 ವಿಮಾನಗಳ ಯಾನ ರದ್ದು
Advertisement
Advertisement
ಇದುವರೆಗೆ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆತ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ.
Advertisement
ಫೆಂಗಲ್ ಎಂಬ ಪ್ರಬಲ ಚಂಡಮಾರುತದಿಂದ ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಈ ವಾರದ ಆರಂಭದಲ್ಲಿ ಶ್ರೀಲಂಕಾದ ಕರಾವಳಿಯಲ್ಲಿ ಫೆಂಗಲ್ ಚಂಡಮಾರುತದಿಂದ ಆರು ಮಕ್ಕಳು ಸೇರಿದಂತೆ ಕನಿಷ್ಠ 12 ಜನರು ಬಲಿಯಾಗಿದ್ದಾರೆ.
Advertisement
ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಜೆ 7 ಗಂಟೆಯ ವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನಗರದ ಹಲವೆಡೆ ಜಲಾವೃತವಾಗಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: Cyclone Fengal | ತಮಿಳುನಾಡಿಗೆ ಇಂದು ಅಪ್ಪಳಿಸಲಿದೆ ಫೆಂಗಲ್ ಚಂಡಮಾರುತ – ಭೂಕುಸಿತ ಸಾಧ್ಯತೆ
ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಕಲ್ಲಕುರಿಚಿ, ತಮಿಳುನಾಡಿನ ಕಡಲೂರು ಜಿಲ್ಲೆಗಳು ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.