Connect with us

International

85 ಲಕ್ಷ ರೂ. ಮೌಲ್ಯದ ಬಾಳೆಹಣ್ಣು ತಿಂದ ಕಲಾವಿದ

Published

on

ರೋಮ್: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದ 85 ಲಕ್ಷ ರೂ. ಮೌಲ್ಯದ ಬಾಳೆಹಣ್ಣನ್ನು ಅಮೆರಿಕದ ಕಲಾವಿದ ತಿಂದು ಹಾಕಿದ್ದಾರೆ.

ಇಟಲಿಯ ಕಲಾವಿದ ಮೌರಿಜಿಯೊ ಕ್ಯಾಟೆಲನ್ ಅವರು ಯಾವುದೇ ಚಿತ್ರಗಳಿಲ್ಲದ, ಬರಹಗಳಿಲ್ಲದ ಗೋಡೆಯ ಮೇಲೆ ಟೇಪಿನಿಂದ ಅಂಟಿಸಿದ್ದರು. ಈ ಕಲಾಕೃತಿಯನ್ನು ಕ್ಯಾಟೆಲನ್ ಅವರು ಮಿಯಾಮಿ ಬೀಚ್‍ನ ‘ಆರ್ಟ್ ಬೇಸೆಲ್’ನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು. ಇದನ್ನು ಫಾನ್ಸ್ ನ ವ್ಯಕ್ತಿಯೊಬ್ಬರು 85 ಲಕ್ಷ ರೂ. (1.2 ಲಕ್ಷ ಡಾಲರ್) ನೀಡಿ ಖರೀಸಿದ್ದರು. ಆದರೆ ಪ್ರದರ್ಶನ ನೋಡಲು ಬಂದಿದ್ದ ಅಮೆರಿಕದ ಕಲಾವಿದ ಡೇವಿಡ್ ಡಾಟೂನಾ ಅದನ್ನು ತಿಂದು ಹಾಕಿದ್ದಾರೆ.

Advertisement
Continue Reading Below

ಪ್ರದರ್ಶನದಲ್ಲಿ ಡೇವಿಡ್ ಡಾಟೂನಾ 85 ಲಕ್ಷ ರೂ. ಮೌಲ್ಯದ ಬಾಳೆಹಣ್ಣು ತಿನ್ನುತ್ತಿರುವ ದೃಶ್ಯವನ್ನು ಅನೇಕರು ತಮ್ಮ ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಸ್ವತಃ ಡೇವಿಡ್ ಡಾಟೂನಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಹಂಗ್ರಿ ಆರ್ಟಿಸ್ಟ್, ನನ್ನಿಂದ ಕಲಾ ಪ್ರದರ್ಶನ ನಡೆಯಿತು. ನಾನು ಮೌರಿಜಿಯೊ ಕ್ಯಾಟೆಲನ್ ಕಲಾಕೃತಿಗಳನ್ನು ಪ್ರೀತಿಸುತ್ತೇನೆ ಹಾಗೂ ಬಾಳೆಹಣ್ಣು ಕಲಾಕೃತಿಯನ್ನು ನಿಜವಾಗಿಯೂ ಪ್ರೀತಿಸುತ್ತೇನೆ. ಇದು ತುಂಬಾ ರುಚಿಕರವಾಗಿದೆ ಎಂದು ಬರೆದುಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಲಾ ಪ್ರದರ್ಶನ ಗ್ಯಾಲರಿಯ ನಿರ್ದೇಶಕ ಲೂಸಿಯನ್ ಟೆರ್ರಾಸ್, ಮೌರಿಜಿಯೊ ಕ್ಯಾಟೆಲನ್ ಅವರ ಬಾಳೆಹಣ್ಣು ಕಲಾಕೃತಿ ಪ್ರದರ್ಶದ ಆಕರ್ಷನೀಯ ವಸ್ತುವಾಗಿತ್ತು. ಆದರೆ ಡೇವಿಡ್ ಡಾಟೂನಾ ಅದನ್ನು ತಿಂದು ಹಾಕಿದ್ದಾರೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ 15 ನಿಮಿಷದಲ್ಲಿ ಬೇರೆ ಬಾಳೆಹಣ್ಣನ್ನು ಆ ಜಾಗದಲ್ಲಿ ಅಂಟಿಸಲಾಗಿದೆ ಎಂದು ತಿಳಿಸಿದ್ದಾರೆ.

ಇಟಲಿಯ ಕಲಾವಿದ ಮೌರಿಜಿಯಾ ಕ್ಯಾಟೆಲನ್ ಈ ಹಿಂದೆ 18 ಕ್ಯಾರೆಟ್‍ಗಳ ಚಿನ್ನದಿಂದ ಕಮೋಡ್ ತಯಾರಿಸಿದ್ದರು. ಈ ಶೌಚಾಲಯದ ಕಮೋಡ್ ಮೌಲ್ಯವು 12.78 ಕೋಟಿ ರೂ. (1.8 ದಶಲಕ್ಷ ಡಾಲರ್) ಆಗಿತ್ತು. ಇದಕ್ಕೆ ಅಮೆರಿಕ ಎಂದು ಹೆಸರು ಇಡಲಾಗಿತ್ತು. ಈ ಕಮೋಡ್ ಅನ್ನು ಇದೇ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಬ್ರಿಟನ್‍ನ ಬ್ಲೆನ್‍ಹೈಮ್ ಅರಮನೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಆದರೆ ಇದನ್ನು ಕಳ್ಳರು ಎಗರಿಸಿದ್ದು, ವಿಶ್ವಕ್ಕೆ ಅಚ್ಚರಿ ಮೂಡಿಸಿತ್ತು.

Click to comment

Leave a Reply

Your email address will not be published. Required fields are marked *