ಶಿಮ್ಲಾ: ರಷ್ಯಾ, ಉಕ್ರೇನ್ ನಡುವಿನ ಯುದ್ಧದಲ್ಲಿ ಸಿಲುಕಿದ್ದ ಮಗಳನ್ನು ಅಪಾಯದಿಂದ ಪಾರು ಮಾಡಿ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದ ಕಾರಣಕ್ಕೆ ತಂದೆಯೊಬ್ಬರು ಪಿಎಂ ಕೇರ್ಸ್ ಫಂಡ್‍ಗೆ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.
Advertisement
ಯುದ್ಧದ ನಡುವೆ ಬಂಕರ್‌ನಲ್ಲಿ ಉಳಿದುಕೊಂಡಿದ್ದ 32 ಜನ ಹಿಮಾಚಲಪ್ರದೇಶದ ವಿದ್ಯಾರ್ಥಿಗಳ ತಂಡ ಭಾನುವಾರ ಸುರಕ್ಷಿತವಾಗಿ ದೆಹಲಿ ಬಂದು ತಲುಪಿತ್ತು. ಈ ತಂಡದಲ್ಲಿ ಅಂಕಿತಾ ಠಾಕೂರ್ ಕೂಡ ಒಬ್ಬರಾಗಿದ್ದರು. ಅಂಕಿತಾ ಠಾಕೂರ್ ಹಿಮಾಚಲಪ್ರದೇಶದ ಹಮೀರ್‍ಪುರ ಜಿಲ್ಲೆಯ ಚುನ್ಹಾಲ್ ಗ್ರಾಮದವರು. ಉನ್ನತ ವ್ಯಾಸಂಗಕ್ಕಾಗಿ ಉಕ್ರೇನ್‍ಗೆ ತೆರಳಿದ್ದರು. ಈ ಮಧ್ಯೆ ಉಕ್ರೇನ್‍ನಲ್ಲಿ ಯುದ್ಧ ಆರಂಭವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನೂ ಓದಿ: ಭಾರತದ ಮೇಲೆ ಯುದ್ಧದ ಎಫೆಕ್ಟ್: ಖಾದ್ಯತೈಲ, ಗೋಧಿ, ಸಿಮೆಂಟ್, ಕಬ್ಬಿಣ ದುಬಾರಿ
Advertisement
Advertisement
ಅಂಕಿತಾ ಠಾಕೂರ್ ತಂದೆ ಜಿಪಿ ಸಿಂಗ್ ಆರ್ಯುವೇದ ವೈದ್ಯರು. ತಾಯಿ ಅನಿತಾ ದೇವಿ ಗೃಹಿಣಿ. ಮಗಳು ಅಂಕಿತಾ ಠಾಕೂರ್‌ರನ್ನು ಉನ್ನತ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‍ಗೆ ಕಳುಹಿಸಿದ್ದರು. ಈ ನಡುವೆ ಏಕಾಏಕಿ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಘೋಷಿಸಿತ್ತು. ಈ ವೇಳೆ ಮಗಳ ಸ್ಥಿತಿಯನ್ನು ಕಂಡು ಮರುಗಿದ್ದ ಪೋಷಕರು ಮಗಳನ್ನು ಹೇಗಾದರೂ ಮಾಡಿ ಕರೆ ತನ್ನಿ ಎಂದು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಖಾರ್ಕಿವ್‌ನಲ್ಲಿ ಸಿಲುಕಿದ್ದ ಎಲ್ಲಾ ಭಾರತೀಯರ ರಕ್ಷಣೆ – ಎಂಇಎ
Advertisement
ಕಡೆಗೂ ಯುದ್ಧದ ನಡುವೆ ಕೆಂದ್ರ ಸರ್ಕಾರದ ಯಶಸ್ವಿ ಕಾರ್ಯಚರಣೆ ಆಪರೇಷನ್ ಗಂಗಾದಡಿ ಅಂಕಿತಾ ಠಾಕೂರ್‌ರನ್ನು ಯಶಸ್ವಿಯಾಗಿ ತಾಯ್ನಾಡಿಗೆ ಮರಳಿದರು. ಇದರಿಂದ ಆಕೆಯ ಪೋಷಕರು ತುಂಬಾ ಸಂತೋಷಗೊಂಡಿದ್ದಾರೆ. ಮಗಳ ಮುಖ ಮತ್ತೆ ನೋಡಳು ಸಿಗುತ್ತೋ ಇಲ್ಲವೋ ಎಂಬ ಆತಂಕದಲ್ಲಿದ್ದ ಜಿಪಿ ಸಿಂಗ್ ಮತ್ತು ಅನಿತಾ ದೇವಿಗೆ ಮಗಳು ಮತ್ತೆ ಮನೆಗೆ ಬಂದಾಗ ಸಂತಸವಾಗಿದೆ. ಈ ಸಂತಸದ ನಡುವೆ ಅಂಕಿತಾ ಠಾಕೂರ್‍ರನ್ನು ಸುರಕ್ಷಿತವಾಗಿ ಕರೆತಂದ ಕಾರಣಕ್ಕಾಗಿ ಅದರ ಖರ್ಚು ಎಂಬಂತೆ, ಜಿಪಿ ಸಿಂಗ್ ಕೇಂದ್ರ ಸರ್ಕಾರದ ಪಿಎಂ ಕೇರ್ಸ್ ಫಂಡ್‍ಗೆ 21 ಸಾವಿರ ರೂ. ಮತ್ತು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿಗೆ 11 ಸಾವಿರ ರೂ. ದೇಣಿಗೆಯಾಗಿ ನೀಡಿದ್ದಾರೆ.
ಉಕ್ರೇನ್‍ನಿಂದ ದೆಹಲಿವರೆಗೆ ಕೇಂದ್ರ ಸರ್ಕಾರ ಅಂಕಿತಾ ಠಾಕೂರ್‌ರನ್ನು ಕರೆತಂದರೆ, ದೆಹಲಿಯಿಂದ ಹಿಮಾಚಲಪ್ರದೇಶಕ್ಕೆ ರಾಜ್ಯ ಸರ್ಕಾರ ಕರೆ ತಂದಿತ್ತು. ಈ ಖರ್ಚನ್ನು ಇದೀಗ ಜಿಪಿ ಸಿಂಗ್ ನೀಡಿ ಔದಾರ್ಯ ಮೆರೆದಿದ್ದಾರೆ. ಇದನ್ನೂ ಓದಿ: ಜೀವದ ಮೇಲೆ ಅಸೆ ಬಿಟ್ಟು, ಒಂದು ವಾರ ನಡೆದುಕೊಂಡು ಬಂದು ಉಕ್ರೇನ್ ದಾಟಿದೆ: ಸೀನ್ಯ
ಹಿಮಾಚಲ ಪ್ರದೇಶದ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಶಿಕ್ಷಣ ಪಡೆಯುತ್ತಿದ್ದರು ಎಂಬ ಮಾಹಿತಿ ಸರ್ಕಾರ ನೀಡಿದೆ. ಅಲ್ಲದೆ ಬಜೆಟ್ ಅಧಿವೇಶನದಲ್ಲಿ ಸಿಎಂ ಜೈ ರಾಮ್ ಠಾಕೂರ್ ಉಕ್ರೇನ್‍ನಲ್ಲಿ ಸಿಲುಕಿರುವ ಹಿಮಾಚಲ ಪ್ರದೇಶದ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಚರಣೆ ಬಗ್ಗೆ ವಿದೇಶಾಂಗ ಸಚಿವಾಲಯದ ಜೊತೆ ಮಾತನಾಡಿದ್ದರು. ಈಗಾಗಲೇ ಕೆಲ ವಿದ್ಯಾರ್ಥಿಗಳು ಸುರಕ್ಷಿತವಾಗಿ ರಾಜ್ಯಕ್ಕೆ ಆಗಮಿಸಿದ್ದು, ಇನ್ನಷ್ಟು ವಿದ್ಯಾರ್ಥಿಗಳು ಬರಬೇಕಾಗಿದೆ.
ಉಕ್ರೇನ್‍ಗೆ ವಿದ್ಯಾರ್ಥಿಗಳು ಸ್ವತಂ ಖರ್ಚಿನಲ್ಲಿ ಹೋಗಿದ್ದಾರೆ. ಹೀಗಾಗಿ ಅವರನ್ನು ಭಾರತ ಸರ್ಕಾರ ಮಾನವೀಯತೆ ದೃಷ್ಟಿಯಿಂದ ಉಚಿತವಾಗಿ ಕರೆ ತಂದರೂ ವಿಮಾನ ಪ್ರಯಾಣದ ವೆಚ್ಚವನ್ನು ಅವರು ನೀಡಬೇಕು. ಜನರ ತೆರಿಗೆ ದುಡ್ಡಿನಿಂದ ಅವರು ವಿದೇಶದಿಂದ ಬರುವುದು ಸರಿಯಲ್ಲ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡಯುತ್ತಿದೆ. ಈ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಗಳ ವಿಮಾನ ಪ್ರಯಾಣದ ಖರ್ಚನ್ನು ಪಿಎಂ ಕೇರ್ಸ್ ಫಂಡ್‌ಗೆ ಜಿಪಿ ಸಿಂಗ್ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.