Dakshina KannadaDistrictsKarnatakaLatestMain Post

ಅಂಬುಲೆನ್ಸ್‌ಗೆ ದಾರಿ ಬಿಡದೇ ಪುಂಡಾಟ – ಕಾರು ಚಾಲಕ ಬಂಧನ

ಮಂಗಳೂರು: ಅಂಬುಲೆನ್ಸ್‌ಗೆ ಸರಿಸುಮಾರು 40 ಕಿಲೋಮೀಟರ್‌ ವರೆಗೂ ದಾರಿ ಬಿಡದೆ ಕಾರು ಚಾಲಕನೊಬ್ಬ ಪುಂಡಾಟ ಮೆರೆದ ಘಟನೆ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ವರದಿ ಆಗಿದೆ.

ನಿನ್ನೆ ಸಂಜೆ ಮಂಗಳೂರಿನಿಂದ ಭಟ್ಕಳಕ್ಕೆ ರೋಗಿಯನ್ನು ಕರೆದುಕೊಂಡು ಹೊರಟಿದ್ದ ಅಂಬುಲೆನ್ಸ್‌ಗೆ ಮುಲ್ಕಿಯಿಂದ ಉಡುಪಿವರೆಗೆ ಸುಮಾರು 40 ಕಿ.ಮೀ. ದೂರ ದಾರಿ ಬಿಡದೇ ಕಾರು ಚಾಲಕ ಸತಾಯಿಸಿದ್ದಾನೆ. ಕೆಎ-19-ಎಂಡಿ 6843 ಮಂಗಳೂರು ರಿಜಿಸ್ಟ್ರೇಷನ್‍ನ ಕಾರು ಇದಾಗಿದ್ದು, ಮೊಹ್ಮದ್ ರಿಜ್ವಾನ್ ಎಂಬುವರ ಹೆಸರಿನಲ್ಲಿದೆ. ಅಂಬುಲೆನ್ಸ್‌ಗೆ ದಾರಿ ಬಿಡದ ಪುಂಡ ಕಾರು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಉತ್ತರಾಖಂಡ ಚುನಾವಣೆ: ಅತ್ಯಾಚಾರ ಆರೋಪಿ ಸೇರಿ 10 ಶಾಸಕರನ್ನು ಪಟ್ಟಿಯಿಂದ ಕೈಬಿಟ್ಟ ಬಿಜೆಪಿ

ನಿನ್ನೆ ರಾತ್ರಿಯೂ ಕೂಡ, ಮಣಿಪಾಲದಿಂದ ಮಂಗಳೂರಿಗೆ ಹೋಗುತ್ತಿದ್ದ ಅಂಬುಲೆನ್ಸ್‌ಗೆ ಇದೇ ರೀತಿ ಕಿರಿಕ್ ಮಾಡಿದ್ದ ಎಂದು ಹೇಳಲಾಗುತ್ತಿದೆ. ಸದ್ಯ ಕಾರು ಚಾಲಕನ ವಿರುದ್ಧ ಸುರತ್ಕಲ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸೋಮೋಟೋ ಪ್ರಕರಣ ದಾಖಲಾಗಿತ್ತು. ಬಳಿಕ ಇದೀಗ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಂಗಳೂರಿನ ಅತ್ತಾವರ ನಿವಾಸಿ ಮೋನಿಶ್ ಎಂದು ಗುರುತಿಸಲಾಗಿದ್ದು ಕಾರು ಮತ್ತು ಮೋನಿಶ್‍ನನ್ನು ಪೊಲೀಸರು ಬಂಧಿಸಿ ವೀಡಿಯೋ ದಾಖಲೆ ಆಧರಿಸಿ ಅತೀ ವೇಗ, ನಿರ್ಲಕ್ಷ್ಯದ ಚಾಲನೆ, ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಯಕ್ಷಗಾನ ಕಲಾವಿದ ದುರ್ಮರಣ

 

Leave a Reply

Your email address will not be published.

Back to top button