ದುಬೈ: ಮೇಕಪ್ ಇಲ್ಲದೇ ಹೆಂಡತಿ ಮುಖವನ್ನು ದಿನ ನೋಡಲಾಗುತ್ತಿಲ್ಲ ಎಂದು ಈಜಿಪ್ಟಿಯನ್ ವ್ಯಕ್ತಿಯೊಬ್ಬ ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಘಟನೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿದೆ.
34 ವಯಸ್ಸಿನ ವ್ಯಕ್ತಿ ತನ್ನ 28 ವಯಸ್ಸಿನ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ. ಪತಿಯ ವಿಚ್ಛೇದನ ನಿರ್ಧಾರದಿಂದ ಆಘಾತಗೊಂಡಿರುವ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಕ್ಕು, ಶ್ವಾನಗಳಲ್ಲೂ ಕೊರೊನಾ ರೂಪಾಂತರ ಆಲ್ಫಾ ಸೋಂಕು ಪತ್ತೆ- ಅಧ್ಯಯನ
ಮದುವೆಗೂ ಮುನ್ನ ನನ್ನ ಪತ್ನಿ ತುಂಬಾ ಮೇಕಪ್ ಬಳಸುತ್ತಿದ್ದಳು. ಮೇಕಪ್ ರಹಿತವಾಗಿ ಆಕೆಯ ಮುಖವನ್ನು ನೋಡಲು ಬೇಸರವಾಗುತ್ತೆ. ಮೇಕಪ್ ಇಲ್ಲದೇ ಆಕೆ ಚೆನ್ನಾಗಿ ಕಾಣುವುದಿಲ್ಲ ಎಂದು ಪತಿ ದೂರಿದ್ದಾರೆ. ಅಲ್ಲದೇ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿಯೇ ಮದುವೆಯಾಗಲು ಆಗಮಿಸಿದ ಪ್ರೇಮಿಗಳು
ಈಕೆ ನನಗೆ ಫೇಸ್‌ಬುಕ್‌ನಲ್ಲಿ ಪರಿಚಯವಾದರು. ಮೇಕಪ್‌ನಲ್ಲಿರುವ ಸುಂದರ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. ಇಬ್ಬರಿಗೂ ಪರಿಚಯವಾಯಿತು. ನಂತರ ಇಬ್ಬರೂ ಹಲವು ಬಾರಿ ಭೇಟಿಯಾಗಿದ್ದೆವು. ಇವರು ಅತಿಯಾಗಿ ಮೇಕಪ್ ಮಾಡಿಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಿರಲಿಲ್ಲ. ನಂತರ ಇಬ್ಬರೂ ವಿವಾಹವಾದೆವು. ಈಗ ಆಕೆಯನ್ನು ಮೇಕಪ್ ಇಲ್ಲದೇ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಪತಿ ತಿಳಿಸಿದ್ದಾರೆ.