ಚಂಡೀಗಢ: ತನ್ನ ಪತ್ನಿಯೊಂದಿಗೆ ಕಳ್ಳ ಸಂಬಂಧ (Affair) ಹೊಂದಿದ್ದ ವ್ಯಕ್ತಿಯನ್ನ ಪತ್ತೆಹಚ್ಚಿ, ಸ್ನೇಹಿತರ ಸಹಾಯದಿಂದ ಅಪಹರಿಸಿ ಬಳಿಕ ಹೊಲದಲ್ಲಿ 7 ಅಡಿ ಆಳದ ಗುಂಡಿಯಲ್ಲಿ ಜೀವಂತವಾಗಿ ಹೂತುಹಾಕಿದ ಘಟನೆ ಹರಿಯಾಣದ ರೋಹ್ಟಕ್‌ನಲ್ಲಿ (Haryana’s Rohtak) ನಡೆದಿದೆ.
ಹೌದು. ಚಂಡೀಗಢ ಮೂಲದ ವ್ಯಕ್ತಿ ತನ್ನ ಮನೆಯ ಬಾಡಿಗೆದಾರನು (Tenant) ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದನ್ನು ಪತ್ತೆಹಚ್ಚಿದ ಬಳಿಕ 7 ಅಡಿ ಗುಂಡಿ ತೆಗೆದು ಆತನನ್ನ ಸಜೀವವಾಗಿ ಹೂತುಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆ ಮಾಡಿದ ವ್ಯಕ್ತಿ ಓರ್ವ ಯೋಗ ಶಿಕ್ಷಕನಾಗಿದ್ದಾನೆ. ಇದನ್ನೂ ಓದಿ: ವಿಜಯೇಂದ್ರ, ಯತ್ನಾಳ್ ಟೀಂಗೆ ‘ಹೈ’ ಶಾಕ್ – ಐವರು ನಾಯಕರಿಗೆ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್
ಕಳೆದ ವರ್ಷ ಡಿಸೆಂಬರ್‌ನಲ್ಲಿ ಘಟನೆ ನಡೆದಿತ್ತು. ಪೊಲೀಸರು ಸುದೀರ್ಘ ತನಿಖೆ ಬಳಿಕ ಆರೋಪಿಯನ್ನ ಬಂಧಿಸಿದ್ದು, ಇದೀಗ ಶವವನ್ನ ಹೊರ ತೆಗೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿರುವುದು ದೃಢ
ಏನಿದು ಕೇಸ್?
ರೋಹ್ಟಕ್‌ನ ಬಾಬಾ ಮಸ್ತನಾಥ್ ವಿಶ್ವವಿದ್ಯಾನಿಲಯದಲ್ಲಿ ಯೋಗ ಕಲಿಸುತ್ತಿದ್ದ ಜಗದೀಪ್ ತನ್ನ ಮನೆಯ ಒಂದು ಭಾಗವನ್ನು ಹರ್ದೀಪ್ ಎಂಬಾತನಿಗೆ ಬಾಡಿಗೆ ನೀಡಿದ್ದ. ಆದ್ರೆ ಬಾಡಿಗೆ ಮನೆಯಲ್ಲಿದ್ದ ಹರ್ದೀಪ್ ಆತನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇದನ್ನು ಪತ್ತೆಹಚ್ಚಿದ ಜಗದೀಪ್, ತನ್ನ ಸ್ನೇಹಿತರ ಸಹಾಯ ಪಡೆದು ಕೊಲೆ ಮಾಡುವ ಸ್ಕೆಚ್ ಹಾಕಿದ್ದಾನೆ. ಚರ್ಖಿ ದಾದ್ರಿಯ ಪಂತವಾಸ್ ಗ್ರಾಮದಲ್ಲಿ 7 ಅಡಿ ಆಳದ ಗುಂಡಿ ತೆಗೆಸಿದ್ದಾನೆ. ಗುಂಡಿ ತೆಗೆಯುವವರು ಮೊದಲು ಕಾರಣ ಕೇಳಿದಾಗ ಇದು ಬೋರ್‌ವೆಲ್‌ಗೆ ಅಂದಿದ್ದಾನೆ. ಬಳಿಕ ಸ್ನೇಹಿತರ ಸಹಾಯದಿಂದ ಹರ್ದೀಪ್‌ನ ಕೈಕಾಲುಗಳನ್ನು ಕಟ್ಟಿಹಾಕಿ, ಬಾಯಿಗೆ ಟೇಪ್ ತುರುಕಿ ಜೀವಂತವಾಗಿ ಹೂತುಹಾಕಿದ್ದಾನೆ.
ಕೊಲೆಯಾದ 10 ದಿನಗಳ ಬಳಿಕ ಜ.3ರಂದು ಶಿವಾಜಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ಸಂಬಂದ ತನಿಖೆ ಕೈಗೊಂಡಿದ್ದ ಪೊಲೀಸರು ಜದೀಪ್ ದೂರವಾಣಿ ಕರೆಗಳನ್ನು ಪರಿಶೀಲಿಸಿದ ಬಳಿಕ ನಿಜಾಂಶ ಬಯಲಾಗಿದೆ. ಬಳಿಕ ಜಗದೀಪ್‌ನನ್ನ ಕೋರ್ಟ್‌ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರು, ಕೊಲೆಗೆ ಸಹಕಾರ ನೀಡಿದ ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ಅಪರಾಧ ತನಿಖಾ ಘಟಕದ ಉಸ್ತುವಾರಿ ಕುಲದೀಪ್ ಸಿಂಗ್ ಹೇಳಿದ್ದಾರೆ.