ಚೆನ್ನೈ: ವ್ಯಕ್ತಿಯೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಾಪ್ಪುವುದಕ್ಕೂ ಮೊದಲು ಭಾರೀ ಅನಾಹುತದಿಂದ ಪತ್ನಿ ಹಾಗೂ ಮಗಳ ಪ್ರಾಣ ರಕ್ಷಿಸಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಉಬೈದುಲ್ಲಾ ಪತ್ನಿ, ಮಗಳ ಪ್ರಾಣ ಉಳಿಸಿ ಜೀವ ಕಳೆದುಕೊಂಡ ವ್ಯಕ್ತಿಯಾಗಿದ್ದು, ರಸ್ತೆ ಅಪಘಾತದಲ್ಲಿ ಇಬ್ಬರ ಪ್ರಾಣ ಉಳಿಸಿದ್ದಾರೆ. ಸದ್ಯ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರ ತನಿಖೆ ಆರಂಭಿಸಿದ್ದಾರೆ.
ನಡೆದಿದ್ದೇನು:
ಚೆನ್ನೈನಲ್ಲಿ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದ ಸಂಬಂಧಿಗಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಉಬೈದುಲ್ಲಾ ತಮ್ಮ ಪತ್ನಿ, ಮಗಳೊಂದಿಗೆ ಆಗಮಿಸಿದ್ದರು. ಅಂತ್ಯಕ್ರಿಯೆ ನಡೆದ ಬಳಿಕ ಉಬೈದುಲ್ಲಾ ತಮ್ಮ ಗ್ರಾಮಕ್ಕೆ ತೆರಳಲು ಕುಟುಂಬದೊಂದಿಗೆ ಚೆನ್ನೈನ ತಿರುಮಂಗಲಂ ಬಳಿ ನಡೆದುಕೊಂಡು ಹೋಗುತ್ತಿದ್ದರು. ಆದರೆ ಈ ವೇಳೆ ಇವರತ್ತ ವೇಗವಾಗಿ ಬಂದ ಕಾರು ಉಬೈದುಲ್ಲಾರನ್ನು ಬಲಿ ಪಡೆಯಿತು.
ಸಾವಿಗೂ ಮುನ್ನ ಕಾರು ವೇಗವಾಗಿ ತಮ್ಮತ್ತ ಮುನ್ನುಗಿದನ್ನು ಕಂಡ ಆತ ಪತ್ನಿ, ಮಗಳನ್ನು ರಸ್ತೆ ಪಕ್ಕಕ್ಕೆ ತಳ್ಳಿ ಕಾಪಾಡಿದ್ದರು. ಆದರೆ ವೇಳೆ ಕಾರು ಉಬೈದುಲ್ಲಾ ಅವರಿಗೆ ಡಿಕ್ಕಿಯಾದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಕುರಿತು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದು, ಸ್ಕಾರ್ಪಿಯೋ ಕಾರು ವೇಗವಾಗಿ ಬರುವುದನನ್ನು ಗಮನಿಸಿದ ನಾನು ಅಪಘಾತವನ್ನು ತಪ್ಪಿಸಲು ನನ್ನ ಕಾರಿನ ವೇಗವನ್ನು ಕಡಿಮೆ ಮಾಡಿದೆ. ಆದರೆ ಸ್ಲಾರ್ಪಿಯೋ ಕಾರಿನ ಚಾಲಕ ವೇಗವಾಗಿ ಬಂದ ಕಾರಣ ನನ್ನ ಕಾರಿನ ಒಂದು ಹಿಂಭಾಗಕ್ಕೆ ಡಿಕ್ಕಿಯಾಗಿತ್ತು. ಬಳಿಕ ರಸ್ತೆ ಬದಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆಯಿತು ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews