ಹೈದರಾಬಾದ್: ಇಬ್ಬರು ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳು ಯೂಟ್ಯೂಬ್ ನೋಡಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಯತ್ನಿಸಿದ್ದರಿಂದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.
ಮೃತದುರ್ದೈವಿಯನ್ನು ಪ್ರಕಾಶಂ ಜಿಲ್ಲೆಯ ಶ್ರೀಕಾಂತ್ (28) ಎಂದು ಗುರುತಿಸಲಾಗಿದೆ. ಶ್ರೀಕಾಂತ್ ಕೆಲ ದಿನಗಳ ಹಿಂದೆ ಪತ್ನಿಯನ್ನು ತೊರೆದು ಒಂಟಿ ಜೀವನ ನಡೆಸುತ್ತಿದ್ದರು. ನಂತರ ಇಬ್ಬರು ಬಿಫಾರ್ಮಾ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಇಚ್ಛೆಯನ್ನು ಬಹಿರಂಗಪಡಿಸಿದ್ದರು. ಅಲ್ಲದೇ ಕಡಿಮೆ ಬೆಲೆಗೆ ಆಪರೇಷನ್ ಮಾಡುವಂತೆ ಕೇಳಿಕೊಂಡು ಶಸ್ತ್ರ ಚಿಕಿತ್ಸೆಗಾಗಿ ಮುಂಬೈಗೆ ತೆರಳಿದ್ದರು. ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್‍ನಿಂದ ಗ್ರೌಂಡ್ ರಿಪೋರ್ಟ್ ಮಾಡಿದ ವಿದ್ಯಾರ್ಥಿಗಳು
Advertisement
Advertisement
ನಂತರ ಶಸ್ತ್ರ ಚಿಕಿತ್ಸೆಗಾಗಿ ಮೂವರು ಖಾಸಗಿ ಲಾಡ್ಜ್‌ನ ಕೊಠಡಿಯನ್ನು ಬಾಡಿಗೆ ಪಡೆದರು. ಮಸ್ತಾನ್ ಮತ್ತು ಜೀವಾ ಎಂಬ ಇಬ್ಬರು ವಿದ್ಯಾರ್ಥಿಗಳು ಯೂಟ್ಯೂಬ್‍ನಲ್ಲಿ ವೀಡಿಯೊವನ್ನು ಅನುಸರಿಸುವಾಗ ಕಾರ್ಯವಿಧಾನವನ್ನು ಪ್ರಾರಂಭಿಸಿದರು. ದುರದೃಷ್ಟವಶಾತ್ ಶಸ್ತ್ರಚಿಕಿತ್ಸೆ ವೇಳೆ ಶ್ರೀಕಾಂತ್ ಅತಿಯಾದ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.
Advertisement
Advertisement
ಲಾಡ್ಜ್ ಸಿಬ್ಬಂದಿ ಕೊಠಡಿಯೊಳಗೆ ಶವ ಪತ್ತೆಯಾದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಇದೀಗ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಶ್ರೀಕಾಂತ್ ಸಾವಿಗೆ ಅತಿಯಾದ ನಿದ್ರಾಜನಕ ಮತ್ತು ರಕ್ತಸ್ರಾವವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ಕಿವ್‍ನಲ್ಲಿ ಗ್ಯಾಸ್ ಪೈಪ್‍ಲೈನ್ ಸ್ಫೋಟಿಸಿದ ರಷ್ಯಾ ಸೇನೆ..!