ಮೈಸೂರು: ಸ್ನೇಹಿತರ (Friends) ಜೊತೆ ಇಸ್ಪೀಟ್ ಆಡುತ್ತಿದ್ದಾಗಲೇ ವ್ಯಕ್ತಿಯೊಬ್ಬ (Man) ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮೈಸೂರು (Mysuru) ಜಿಲ್ಲೆಯಲ್ಲಿ ನಡೆದಿದೆ.
ಆಶ್ವಥ್ ಚಿಯಾ ಮೃತ ವ್ಯಕ್ತಿ. ಈತ ಮೈಸೂರು ಜೆಡಿಎಸ್ (JDS) ಮುಖಂಡನಾಗಿದ್ದ. ಕ್ಲಬ್‍ನಲ್ಲಿ ಸ್ನೇಹಿತರ ಜೊತೆ ಕುಳಿತು ಇಸ್ಪೀಟ್ ಆಡುತ್ತಿದ್ದ. ಆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಅಶ್ವಥ್‍ಗೆ ಹೃದಯಾಘಾತವಾಗಿ ಕುಸಿದು ಬಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ವೈದ್ಯರು ಮೃತ ಪಟ್ಟಿರುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಪ್ರತಿಭಟನಾ ರ‍್ಯಾಲಿಯ ಟ್ರಕ್ ಅಡಿಗೆ ಸಿಲುಕಿ ಪತ್ರಕರ್ತೆ ಸಾವು
Advertisement
Advertisement
ಮೈಸೂರು, ಬೆಂಗಳೂರು ರಸ್ತೆಯ ರಿಕ್ರಿಯೇಶನ್ ಕ್ಲಬ್‍ನಲ್ಲಿ ಈ ಘಟನೆ ನಡೆದಿದೆ. ಅಶ್ವಥ್ ಕೊನೆಯ ಕ್ಷಣಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅಶ್ವಥ್ ಮೈಸೂರಿನ ಮಂಡಿ ಮೊಹಲ್ಲಾದ ನಿವಾಸಿಯಾಗಿದ್ದು, ಕೆಲ ದಿನಗಳಿಂದ ರಾಜಕೀದಿಂದ ದೂರವಾಗಿದ್ದರು. ಇದನ್ನೂ ಓದಿ: ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣ- ನೀಲಾಂಬಿಕೆ ಮೊಬೈಲ್‍ನಿಂದ ನಿತ್ಯ ಮೆಸೇಜ್!