ಮಂಡ್ಯ: ಎದೆಉರಿ ಎಂದು ಬಿಸಿನೀರು ಕುಡಿಯುವ ವೇಳೆ ವ್ಯಕ್ತಿಯೋರ್ವ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malavalli) ತಾಲೂಕಿನ ಅಟ್ಟುವನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಅಟ್ಟುವನಹಳ್ಳಿ ಗ್ರಾಮದ ಪುಟ್ಟಸ್ವಾಮಿ (55) ಮೃತ ವ್ಯಕ್ತಿ. ಇಂದು ಬೆಳಗ್ಗೆ ಪುಟ್ಟಸ್ವಾಮಿ ಜಮೀನಿಗೆ ತೆರಳಿ ಮೇಕೆಗಳಿಗೆ ಮೇವು ತಂದಿದ್ದಾರೆ. ಬಳಿಕ ಎದೆ ಉರಿಯುತ್ತಿದೆ ಎಂದು ಬಿಸಿನೀರು ಕೇಳಿದ್ದಾರೆ. ಇದನ್ನೂ ಓದಿ: ಚಾಣಕ್ಯ ವಿವಿಗೆ ಹಂಚಿಕೆಯಾಗಿದ್ದ ಭೂಮಿಗೆ ಲ್ಯಾಂಡ್ ಆಡಿಟ್ – ಜಮೀನು ವಾಪಸ್ ಪಡೆಯುತ್ತಾ ಸರ್ಕಾರ?
ಬಳಿಕ ಪುಟ್ಟಸ್ವಾಮಿ ಬಿಸಿನೀರು ಕುಡಿಯುವ ವೇಳೆ ಎದೆ ಹಿಡಿದುಕೊಂಡು ಕುಸಿದು ಬಿದ್ದಿದ್ದಾರೆ. ನಂತರ ಮನೆಯವರು ಪುಟ್ಟಸ್ವಾಮಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಇದನ್ನೂ ಓದಿ: ಹೆಣ್ಣುಮಕ್ಕಳನ್ನ ಅವಹೇಳನ ಮಾಡೋದೇ ಬಿಜೆಪಿ ಸಂಸ್ಕೃತಿ: ಹರಿಪ್ರಸಾದ್ ಕಿಡಿ