ಬೀದರ್: ವೇಗವಾಗಿ ಚಲಿಸುತ್ತಿದ್ದ ಪರಿಣಾಮ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೀದರ್ (Bidar) ಜಿಲ್ಲೆಯ ಔರಾದ್ (Aurad) ತಾಲೂಕಿನ ಧರಿಹನುಮಾನ್ ಕ್ರಾಸ್ ಬಳಿ ನಡೆದಿದೆ.
ಕಾರು ಪಲ್ಟಿಯಾದ ರಭಸಕ್ಕೆ 47 ವರ್ಷದ ಶಿವಕುಮಾರ್ ಪೊಲೀಸ್ ಪಾಟೀಲ್ ಎಂಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಲತಃ ಔರಾದ್ ತಾಲೂಕಿನ ಧೂಪತ್ ಮಹಾಗಾಂವ್ ಗ್ರಾಮದವರಾದ ವ್ಯಕ್ತಿ ಸಂತಪೂರ್ ಕಡೆಯಿಂದ ಸ್ವ ಗ್ರಾಮಕ್ಕೆ ತೆರಳುತ್ತಿದ್ದಾಗ ಕಾರು ಪಲ್ಟಿಯಾಗಿದೆ. ಇದನ್ನೂ ಓದಿ: ICAR-IIHR ಡೀಮ್ಡ್ ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸಲು ಡಾ.ಮಂಜುನಾಥ್ ಮನವಿ
ಘಟನೆಯ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಕುರಿತು ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೈಸೂರು| 11 ವರ್ಷಗಳ ನಂತರ ಮಾರಮ್ಮ ದೇವಸ್ಥಾನದ ಬಾಗಿಲು ಓಪನ್