ಮಡಿಕೇರಿ: ಕಂಡು ಕೇಳರಿಯದ ಜಲಪ್ರಳಯ ಹಾಗೂ ಭೂ ಕುಸಿತಕ್ಕೆ ಕೊಡಗಿನಲ್ಲಿ ಸುಮಾರು 16 ಮಂದಿ ಬಲಿಯಾಗಿದ್ದಾರೆ. ಕಣ್ಣ ಮುಂದೆಯೇ ವ್ಯಕ್ತಿಯೊಬ್ಬರು ಮಣ್ಣುಪಾಲಾದ ಘಟನೆಯನ್ನು ಹಿರಿಯ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರತ್ಯಕ್ಷದರ್ಶಿ, ನಾಟಿ ಕೆಲಸ ಮುಗಿಸಿ ಮರುದಿನ ಗದ್ದೆ ಕಡೆ ಹೀಗುತ್ತಿದ್ದ ಸಂದರ್ಭದಲ್ಲಿ ಹಠತ್ತಾಗಿ ಗುಡ್ಡವೊಂದು ಕುಸಿದು ಬಿತ್ತು. ಪರಿಣಾಮ ನೀರು ಬಂದು ನಮ್ಮ ಮನೆ ಗದ್ದೆ ತೋಟ ಮುಚ್ಚಿ ಹೋಯ್ತು. ಈ ವೇಳೆ ಪಕ್ಕದ ಮನೆಯ ಮುಕ್ಕಾಟಿಯ ಸಾಬು ಎಂಬವರು ಮನೆಯಲ್ಲಿ ಬಟ್ಟೆ ಒಣಗೋಕೆ ಹಾಕುತ್ತಿದ್ದರು. ಇದೇ ಸಂದರ್ಭದಲ್ಲಿ ಅವರ ಮನೆಯ ಮೇಲೆ ಮರವೊಂದು ಬಿದ್ದಿದ್ದು, ನೋಡ ನೋಡುತ್ತಿದ್ದಂತೆಯೇ ಅವರು ಮಣ್ಣಿನಡಿ ಸಿಲುಕಿದ್ದಾರೆ. ಈವರೆಗೂ ಅವರ ದೇಹ ಸಿಕ್ಕಿಲ್ಲ. ಹೀಗಾಗಿ ಸದ್ಯ ಅಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಅಂತ ಅವರು ಹೇಳಿದ್ರು. ಇದನ್ನೂ ಓದಿ: ಗುಡ್ಡದ ಮೇಲಿನಿಂದ ಹಡಗಿನಂತೆ ಚಲಿಸಿದ ಮನೆ: ಅಜ್ಜಿ, ಮೊಮ್ಮಗು ಪಾರಾದ ಕಥೆ ಓದಿ
Advertisement
Advertisement
ನಮ್ಮ ಮನೆಯ ಆಸುಪಾಸಿನ ಸುಮಾರು 300 ಮನೆಗಳನ್ನು ಸರ್ಕಾರದವರು ಖಾಲಿ ಮಾಡಿಸಿದ್ದಾರೆ. ಅಲ್ಲದೇ ಮಡಿಕೇರಿಯ 3,4 ಗ್ರಾಮಗಳಲ್ಲಿ ಗುಡ್ಡ ಕುಸಿತ ಹಾಗೂ ಎಷ್ಟು ಜನ ಮಣ್ಣುಪಾಲಾಗಿದ್ದಾರೆ ಎಂಬುದಕ್ಕೆ ಲೆಕ್ಕವಿಲ್ಲ ಅಂತ ಅವರು ತಿಳಿಸಿದ್ರು. ಇದನ್ನೂ ಓದಿ: ಮಗಳ ಮದ್ವೆಗಾಗಿ ಕೂಡಿಟ್ಟ ಹಣ, ಚಿನ್ನಕ್ಕಾಗಿ ಮನೆಯ ಅವಶೇಷದಡಿ ಹುಡುಕಾಟ!
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Advertisement
https://www.youtube.com/watch?v=mYi6vJ3i3Wg