ChikkaballapurCrimeDistrictsKarnatakaLatestMain Post

ಭೀಕರ ಅಪಘಾತ – ಬೈಕಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

ಚಿಕ್ಕಬಳ್ಳಾಪುರ: ಬೈಕಿಗೆ ಮತ್ತೊಂದು ಬೈಕ್ ಡಿಕ್ಕಿಯಾದ ಹಿನ್ನೆಲೆಯಲ್ಲಿ ಸವಾರ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಆಚಾರಪ್ಪ(50) ಎಂದು ಗುರುತಿಸಲಾಗಿದ್ದು, ಈತ ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೆ ನಿವಾಸಿ. ಬೈಕ್ ಗಳ ಡಿಕ್ಕಿಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಗನನ್ನ ಬೆಮೆಲ್ ಶೋ ರೂಂಗೆ ಕೆಲಸಕ್ಕೆ ಬಿಟ್ಟು ತಂದೆ ವಾಪಸ್ ತೆರಳುತ್ತಿದ್ದರು. ಹೀಗೆ ವಾಪಸ್ ಯೂ ಟರ್ನ್ ಪಡೆಯುವಾಗ ವೇಗವಾಗಿ ಬಂದ ಬೈಕ್ ಡಿಕ್ಕಿಯಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಆಚಾರಪ್ಪ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.  ಇದನ್ನೂ ಓದಿ: ರಿಲೇಶನ್‌ಶಿಪ್‌ನಲ್ಲಿ ಡಿಸ್ಟೆನ್ಸ್ ಹೆಚ್ಚಾಗಿದ್ದಕ್ಕೆ ಪ್ರಿಯಕರನಿಗೆ ಗುಂಡಿಟ್ಟ ಕಿರಾತಕಿ

ಈ ಸಂಬಂಧ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಕಲಿ ಪೊಲೀಸ್ ಹೆಸ್ರಲ್ಲಿ ಯುವತಿ ಮಾವನಿಗೆ ಕಾಲ್- ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಸಾಕ್ಷಿ ಸೂಸೈಡ್..!

Leave a Reply

Your email address will not be published.

Back to top button