ವಿಜಯಪುರ: ರಥದ (Ratha) ಮೇಲಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ನಡೆದಿದೆ.
ಗುರುವಾರ ಸಂಜೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಶ್ರೀ ಗೋಲ್ಲಾಳೇಶ್ವರ ರಥದ ಮೇಲಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾರೆ. ಗೋಲಗೇರಿ ಗ್ರಾಮದ ಮುದಕಪ್ಪ ಕಾಚಾಪುರ ಸಾವನ್ನಪ್ಪಿದ ದುರ್ದೈವಿ. ರಥಕ್ಕೆ ಕಳಸ ಕಟ್ಟಿ, ಛತ್ರಿ ಕಟ್ಟುತ್ತಿದ್ದಾಗ ಅವರು ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.
ಮುದಕಪ್ಪ 15 ವರ್ಷಗಳಿಂದ ರಥಕ್ಕೆ ಕಳಸ ಕಟ್ಟುವ ಕೆಲಸ ಮಾಡುತ್ತಿದ್ದರು. ಮುದಕಪ್ಪ ಕಳಸ ಕಟ್ಟುತ್ತಿದ್ದಾಗಲೇ ಬಿದ್ದು ಸಾವನ್ನಪ್ಪಿರುವ ಹಿನ್ನೆಲೆ ಊರಿನ ಜಾತ್ರೆಯನ್ನು ಗ್ರಾಮಸ್ಥರು ಮುಂದೂಡಿದ್ದಾರೆ. ಇದನ್ನೂ ಓದಿ: ಧ್ರುವನಾರಾಯಣ ಪತ್ನಿ ವೀಣಾ ನಿಧನ