Connect with us

ಆನೆ ದಾಳಿಗೆ ರೈತ ಬಲಿ ಪ್ರಕರಣ- ಇದೇ ಮೊದಲ ಬಾರಿಗೆ ಮೂವರು ಅಧಿಕಾರಿಗಳ ವಿರುದ್ಧ ಎಫ್‍ಐಆರ್

ಆನೆ ದಾಳಿಗೆ ರೈತ ಬಲಿ ಪ್ರಕರಣ- ಇದೇ ಮೊದಲ ಬಾರಿಗೆ ಮೂವರು ಅಧಿಕಾರಿಗಳ ವಿರುದ್ಧ ಎಫ್‍ಐಆರ್

ಮಡಿಕೇರಿ: ಆನೆ ದಾಳಿಗೆ ರೈತ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಮೂವರು ಅರಣ್ಯಾಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ್, ವಿರಾಜಪೇಟೆ ಉಪ ಅರಣ್ಯಸಂರಕ್ಷಣಾಧಿಕಾರಿ ಮರಿಯಾ ಕೃಷ್ಟರಾಜ್, ಆರ್.ಎಫ್.ಓ ಗಂಗಾಧರ್ ವಿರುದ್ಧ ಕೇಸ್ ದಾಖಲಾಗಿದೆ.

ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿರುವುದಾಗಿ ಅರಣ್ಯ ಇಲಾಖೆ ವಿರುದ್ಧವೇ ರೈತ ಸಂಘದ ಮುಖಂಡ ಸೋಮಯ್ಯ ಎಂಬವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದ ಸಿದ್ದಾಪುರ ಪೊಲೀಸರು ಮೂವರು ಅಧಿಕಾರಿಗಳ ವಿರುದ್ಧ ಇದೀಗ ಎಫ್‍ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ

ಜನವರಿ 22 ರಂದು ವಿರಾಜಪೇಟೆ ತಾಲೂಕಿನ ಕರಡಿಗೋಡಿನಲ್ಲಿ ಮೋಹನ್ ದಾಸ್ ಎಂಬವರು ಆನೆ ದಾಳಿಗೆ ಬಲಿಯಾಗಿದ್ದರು. ಹೀಗಾಗಿ ನಿರಂತರ ಕಾಡಾನೆ ಹಾವಳಿ ತಡೆಯದ ಅರಣ್ಯ ಇಲಾಖೆ ವಿರುದ್ಧ ರೈತರು ನಿರ್ಲಕ್ಷ್ಯತೆಯ ದೂರು ನೀಡಿದ್ದರು.

Advertisement
Advertisement