ನವದೆಹಲಿ: ಪಹಲ್ಗಾಮ್ ದಾಳಿಯ (Pahalgam Attack) ನಂತರ ಪಾಕಿಸ್ತಾನ (Pakistan) ವಿರುದ್ಧ ಇಡೀ ದೇಶವೇ ಸಿಟ್ಟು ಹೊರಹಾಕುತ್ತಿದೆ. ಈ ಮಧ್ಯೆ ಪಾಕ್ ಹೈಕಮಿಷನ್‌ನ ಬಳಿ ಇಂದು ಬೆಳಗ್ಗೆ ವ್ಯಕ್ತಿಯೊಬ್ಬ ಕೇಕ್ (Cake) ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಧ್ಯಮದ ವ್ಯಕ್ತಿಗಳು ಆ ವ್ಯಕ್ತಿಯನ್ನು ಸುತ್ತುವರಿದು, ಯಾಕೆ ಈ ಆಚರಣೆ? ಎಲ್ಲಿಗೆ ತಗೆದುಕೊಂಡು ಹೋಗಲಾಗುತ್ತದೆ ಎಂದು ಪ್ರಶ್ನಿಸಿದರು. ಆದರೆ ಆ ವ್ಯಕ್ತಿ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾನೆ.
Viral video shows man entering the Pakistan High Commission with a cake — #WATCH #PahalgamTerrorAttack #Pahalgam #ViralVideo #Pakistan pic.twitter.com/Pmfd36BzOw
— TIMES NOW (@TimesNow) April 24, 2025
ಪಾಕಿಸ್ತಾನ ಹೈಕಮಿಷನ್‌ನ ಉನ್ನತ ರಾಜತಾಂತ್ರಿಕ ಸಾದ್ ಅಹ್ಮದ್ ವಾರೈಚ್ ಅವರನ್ನು ಬುಧವಾರ ತಡರಾತ್ರಿ ಕೇಂದ್ರವು ಸಮನ್ಸ್ ಜಾರಿ ಮಾಡಿರುವ ಬಗ್ಗೆಯೂ ಅವರನ್ನು ಕೇಳಲಾಯಿತು. ಆದರೆ ಆ ವ್ಯಕ್ತಿ ಯಾವುದೇ ಪ್ರತಿಕ್ರಿಯೆ ನೀಡದೇ ನಡೆದುಕೊಂಡು ಮುಂದೆ ಹೋಗಿದ್ದಾನೆ.
ಪಾಕ್ ಹೈಕಮಿಷನ್‌ಗೆ ನೀಡಲಾಗಿದ್ದ ಭದ್ರತೆಯನ್ನು ಈಗಾಗಲೇ ಭಾರತದ ಸರ್ಕಾರ ಕಡಿತ ಮಾಡಿದೆ. ಅಷ್ಟೇ ಅಲ್ಲದೇ 48 ಗಂಟೆಯ ಒಳಗಡೆ ಭಾರತದಲ್ಲಿರುವ ಸಾರ್ಕ್ ವೀಸಾದ ಅಡಿಯಲ್ಲಿ ಭಾರತಕ್ಕೆ ಬಂದಿರುವ ವ್ಯಕ್ತಿಗಳು ದೇಶವನ್ನು ತೊರೆಯಬೇಕು ಎಂದು ಸೂಚಿಸಿದೆ.