DistrictsKarnatakaLatestMain PostYadgir

ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲೇ ಸಾವು

ಯಾದಗಿರಿ: ಬೋರ್‌ವೆಲ್ ಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಜಮೀನಿಗೆ ನೀರು ತರಲು ಹೋಗಿದ್ದ ಯುವಕ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಮಹೇಶ್ ತಂದೆ ಮಲ್ಲಪ್ಪ ಯಾದವ್(25) ಈ ಅವಘಡದಲ್ಲಿ ಮೃತಪಟ್ಟ ವ್ಯಕ್ತಿ. ತನ್ನ ಚಿಕ್ಕಮ್ಮನೊಂದಿಗೆ ಹೊಲಕ್ಕೆ ತೆರಳಿದ್ದ ಮಹೇಶ್, ಕ್ರಿಮಿನಾಶಕ ಔಷಧಿಗೆ ನೀರು ಮಿಶ್ರಣ ಮಾಡುವುದಕ್ಕಾಗಿ ಪಕ್ಕದ ಜಮೀನಿನಲ್ಲಿದ್ದ ಬೋರ್ ವೇಲ್ ನಿಂದ ನೀರು ತರಲು ಹೋಗಿದ್ದರು. ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ ಕೈ, ದಳ ನಾಯಕರು RSS ಕುರಿತು ಟೀಕೆ ಮಾಡ್ತಿದ್ದಾರೆ: ಬಿ.ವೈ.ವಿಜಯೇಂದ್ರ

ಮೋಟರ್ ಸ್ಟಾರ್ಟ್ ಮಾಡಿ, ಬಳಿಕ ಬೋರ್ ಪೈಪ್ ಬಳಿಗೆ ತೆರಳಿದ್ದಾರೆ. ಈ ವೇಳೆ ಪೈಪ್ ಗೆ ಹೊಂದಿಕೊಂಡಿದ್ದ ಕರೆಂಟ್ ವೈರ್ ಕಟ್ ಆಗಿರುವುದನ್ನು ಮಹೇಶ್ ಅವರು ಗಮನಿಸಿರಲಿಲ್ಲ. ಇದರಿಂದಾಗಿ ವಿದ್ಯುತ್ ತಂತಿ ತಗುಲಿ ಮಹೇಶ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಸ್ಥಳದಲ್ಲಿ ಮೃತ ಮಹೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Related Articles

Leave a Reply

Your email address will not be published. Required fields are marked *