ಚಿಕ್ಕಬಳ್ಳಾಪುರ: ಕೊಳೆತ ಸ್ಥಿತಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆಯ ಪತಿಯ ಶವ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡಕೊಂಡ್ರಹಳ್ಳಿ ಬಳಿ ಪತ್ತೆಯಾಗಿದೆ.
ಉಪ್ಪರಪೇಟೆ ಗ್ರಾಮ ಪಂಚಾಯತ್ ಹಾಲಿ ಅಧ್ಯಕ್ಷೆ ಶಿವಮ್ಮರ ಪತಿ ವೆಂಕಟಸ್ವಾಮಿ(60) ಮೃತದೇಹ ಪತ್ತೆಯಾಗಿದೆ. ವೆಂಕಟಸ್ವಾಮಿ ಜುಲೈ 23 ರಂದು ಮನೆಯಿಂದ ಹೊರ ಹೋಗಿದ್ದರು. ಆದರೆ ಇಂದು ನೀಲಗಿರಿ ತೋಪಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನೀಲಗಿರಿ ತೋಪಿನತ್ತ ಕುರಿ ಮೇಯಿಸಲು ಹೋದ ರಾಮಪ್ಪಗೆ ದುರ್ವಾಸನೆ ಬಂದಿದೆ. ಬಳಿಕ ದುರ್ವಾಸನೆ ಕಂಡು ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
Advertisement
ಮೃತ ವೆಂಕಟಸ್ವಾಮಿ ಬಲಗೈನ ಹೆಬ್ಬೆರಳು ಕಟ್ ಆಗಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಬಲಗೈ ಹೆಬ್ಬೆರಳು ಕಟ್ ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಆದರೆ ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅನುಮಾನಾಸ್ಪದ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
Advertisement
ಮೃತ ವೆಂಕಟಸ್ವಾಮಿ ಕುಟುಂಬದವರು ಸಹ ವೆಂಕಟಸ್ವಾಮಿಗೆ ಯಾರೂ ಶತ್ರುಗಳಿರಲಿಲ್ಲ. ಯಾರ ಮೇಲೂ ಅನುಮಾನ ಇಲ್ಲ ಅಂತ ಪೊಲೀಸರ ಬಳಿ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Advertisement