ಭುವನೇಶ್ವರ್: ಪಟಾಕಿ ಸಿಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಭಾನುವಾರ ಒಡಿಶಾದ ಭುವನೇಶ್ವರ್ ನಲ್ಲಿ ನಡೆದಿದೆ.
ಅಮರೇಶ್ ನಾಯಕ್ ಕೊಲೆಯಾದ ವ್ಯಕ್ತಿ. ಅಮರೇಶ್ ತನ್ನ ಸ್ನೇಹಿತರ ಜೊತೆ ರಾತ್ರಿ ಪಟಾಕಿ ಸಿಡಿಸುತ್ತಿದ್ದನು. ಈ ವೇಳೆ ಶಬ್ದ ಕೇಳಲಾಗದೆ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದು ಪಟಾಕಿ ಸಿಡಿಸಬೇಡಿ ಎಂದು ಯುವಕರಿಗೆ ತಿಳಿಸಿದರು.
ಇದರಿಂದ ಕೋಪಗೊಂಡ ಅಮರೇಶ್ ಹಾಗೂ ಆತನ ಸ್ನೇಹಿತರು ಜನರ ಜೊತೆ ವಾಗ್ವಾದ ನಡೆಸಿದರು. ಹೀಗೆ ಯುವಕರು ಹಾಗೂ ಜನರ ನಡುವೆ ವಾಗ್ವಾದ ಹೆಚ್ಚಾದಾಗ ಗುಂಪೊಂದು ತಲ್ವಾರ್ ನಿಂದ ಅಮರೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಅಮರೇಶ್‍ನನ್ನು ಸ್ನೇಹಿತರು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದರು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇತ್ತ ಅಮರೇಶ್ ಮೇಲೆ ಹಲ್ಲೆ ಮಾಡಿದ ಗುಂಪು ಪರಾರಿಯಾಗಿದೆ.
ಈ ಘಟನೆ ಏರ್ ಫೀಲ್ಡ್ ಪೊಲೀಸ್ ವ್ಯಕ್ತಿಯಲ್ಲಿರುವ ಸುಂದೇರ್‍ಪದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.