ತಿರುವನಂತಪುರ: ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸಿಪಿಐ(ಎಂ) ಪಕ್ಷದ ಮುಖಂಡ 3 ವರ್ಷದಲ್ಲಿ ಪ್ರತಿ ತಿಂಗಳು 15 ದಿನಗಳ ಕಾಲ ಪೆರೋಲ್ ಪಡೆದಿರುವ ಮಾಹಿತಿ ಬಹಿರಂಗ ಗೊಂಡಿದೆ.
ರೆವೊಲ್ಯೂಷನರಿ ಮಾರ್ಕ್ಸಿಸ್ಟ್ ಪಕ್ಷದ (ಆರ್ ಎಂಪಿ) ಪಕ್ಷ ನಾಯಕ ಟಿಪಿ ಚಂದ್ರಶೇಖರನ್ ಎಂಬವರ ಕೊಲೆ ಪ್ರಕರಣದಲ್ಲಿ ಅಪರಾಧಿ ಪಿಕೆ ಕುನ್ಹನಂದನ್ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಆದರೆ 2015 ನಂತರ ಮೂರು ವರ್ಷದಲ್ಲಿ ಪ್ರತಿ ತಿಂಗಳು 15 ದಿನಗಳ ಕಾಲ ಪೆರೋಲ್ ಮೂಲಕ ಬಿಡುಗಡೆಯಾಗುತ್ತಿದ್ದ ವಿಚಾರ ಮಾಹಿತಿ ಹಕ್ಕಿನ ಅಡಿ ಬೆಳಕಿಗೆ ಬಂದಿದೆ.
Advertisement
ಕೊಲೆಯಾದ ಚಂದ್ರಶೇಖರನ್ ಅವರ ಪತ್ನಿ ಕೆಕೆ ರೀಮಾ ಅವರಿಗೆ ಸಿಕ್ಕಿದ ಮಾಹಿತಿ ಪ್ರಕಾರ ಅಪರಾಧಿಗೆ 2017 ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳು ಹೊರತು ಪಡಿಸಿ 2015 ರಿಂದ 2018ರ ವರೆಗೆ ಪ್ರತಿ ತಿಂಗಳು ಪೆರೋಲ್ ಲಭಿಸಿದೆ.
Advertisement
Advertisement
ಏನಿದು ಪ್ರಕರಣ: ಕೇರಳ ಸ್ಥಳೀಯ ರಾಜಕೀಯ ಮುಖಂಡರಾಗಿದ್ದ ಟಿಪಿ ಚಂದ್ರಶೇಖರ್ ಅವರನ್ನು 2012 ಮೇ 4 ರಂದು 51 ಬಾರಿ ತಿವಿದು ಕೊಲೆ ಮಾಡಲಾಗಿತ್ತು. ಚಂದ್ರಶೇಖರ್ ಮೊದಲು ಸಿಪಿಐ(ಎಂ) ಪಕ್ಷದಲ್ಲಿ ಗುರುತಿಸಿಕೊಂಡು ಬಳಿಕ ನೂತನ ರೆವೊಲ್ಯೂಷನರಿ ಮಾರ್ಕ್ಸಿಸ್ಟ್ ಪಕ್ಷದ ನಾಯಕತ್ವ ವಹಿಸಿದ್ದರು. ಚಂದ್ರಶೇಖರನ್ ಕೊಲೆ ಬಳಿಕ ಅವರ ಕ್ಷೇತ್ರದಲ್ಲಿ ಆರ್ ಎಂಪಿ ಪಕ್ಷ ಜಯಗಳಿಸಿತ್ತು.
Advertisement
ಪ್ರಕರಣದ ವಿಚಾರಣೆ ಬಳಿಕ ಸಿಪಿಐ(ಎಂ) ನಾಯಕ ಕೊಲೆಯಲ್ಲಿ ಶಿಕ್ಷೆಗೆ ಗುರಿಯಾಗಿದ್ದ. ಆದರೆ ಚಂದ್ರಶೇಖರನ್ ಕೊಲೆ ನಡೆದು ಆರು ವರ್ಷ ಕಳೆದರೂ ಕೊಲೆ ನಡೆದ ಪ್ರದೇಶದಲ್ಲಿ ನಿರ್ಮಿಸಿಲಾಗಿದ್ದ ಚಂದ್ರಶೇಖರನ್ ಸ್ಮಾರಕ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. 5 ಬಾರಿ ಸ್ಮಾರಕ ನಿರ್ಮಾಣವಾಗಿದ್ದರೂ ಸಿಪಿಐ(ಎಂ) ಕಾರ್ಯಕರ್ತರು ದ್ವಂಸಗೊಳಿಸಿದ್ದಾರೆ. ಪ್ರಸ್ತುತ ನಿರ್ಮಾಣಗೊಂಡಿರುವ ಚಂದ್ರಶೇಖರನ್ ಅವರ ಸ್ಮಾರಕದ ರಕ್ಷಣೆಗೆ ಪೊಲೀಸ್ ರಕ್ಷಣೆಯನ್ನು ಕಲ್ಪಿಸಲಾಗಿದೆ.
ಪೆರೋಲ್ ದುರ್ಬಳಕೆಯಾಗುತ್ತಿರುವ ವಿಚಾರ ತಿಳಿದು ಈಗ ಚಂದ್ರಶೇಖರನ್ ಪತ್ನಿ ರೀಮಾ ಅವರು ಕೇರಳ ಸರ್ಕಾರದ ವಿರುದ್ಧ ಕಾನೂನು ಸಮರ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.