ನವದೆಹಲಿ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು (Wife) ಖುಷಿ ಪಡಿಸಲು ಹೋಗಿ ಪಜೀತಿಗೆ ಒಳಗಾದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿರುವ ವೀಡಿಯೋದಲ್ಲಿ ಪ್ರೀತಿಯಿಂದ ವ್ಯಕ್ತಿಯು ತನ್ನ ಪತ್ನಿಯನ್ನು ಕಿಯಾರಾ ಅಡ್ವಾನಿಗೆ (Kiara Advani) ಹೋಲಿಸುತ್ತಾರೆ. ಇದಕ್ಕೆ ಪತ್ನಿ ಕೋಪಗೊಂಡು ಊಟ ನಿರಾಕರಿಸಿದ್ದಾಳೆ.
When husband compares his wife with @advani_kiara! ????#KiaraAdvani #viral #cutecouple pic.twitter.com/JV99Tw6pPg
— Praveen ???????? (@PraveenSarraf_) February 1, 2023
ಈ ಸಂಪೂರ್ಣ ವೀಡಿಯೋವನ್ನು ಪ್ರವೀಣ್ ಎಂಬ ಟ್ವಿಟ್ಟರ್ ಬಳಕೆದಾರ ಹಂಚಿಕೊಂಡಿದ್ದಾನೆ. 52 ಸೆಕೆಂಡುಗಳ ವೀಡಿಯೋ ಇದಾಗಿದ್ದು, ಕೋಪಗೊಂಡ ಪತ್ನಿ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿರುತ್ತಾಳೆ.
ಕೋಪಬೇಡ, ನನ್ನನ್ನು ಕ್ಷಮಿಸು, ಅವಳು ನಟಿ. ನಾನು ಅವಳನ್ನು ಮದುವೆ ಆಗುತ್ತೇನೆ ಎಂದು ನೀನು ಕೋಪಗೊಳ್ಳುತ್ತೀದ್ದೀಯಾ ಎಂದು ಆತ ಕೇಳುತ್ತಾನೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಹ್ಲಾದ್ ಜೋಶಿ ಸಿಎಂ- ಹೆಚ್‍ಡಿಕೆ ಹೊಸ ಬಾಂಬ್
ಅದಕ್ಕೆ ಆತನ ಪತ್ನಿ ಪ್ರತಿಕ್ರಿಯಿಸಿ, ಹೋಗಿ ಅವಳನ್ನೇ ಮದುವೆಯಾಗು, ನೀನು ಇಲ್ಲಿ ಉಳಿಯಬೇಕಾಗಿಲ್ಲ ಎಂದು ಉತ್ತರಿಸುತ್ತಾಳೆ. ಅದಕ್ಕೆ ಪತಿ, ಹೌದು, ಅವಳು ನನ್ನನ್ನು ಮದುವೆಯಾಗಲು ಸಾಯುತ್ತಿದ್ದಾಳೆ ಎಂದು ವ್ಯಂಗ್ಯವಾಡುತ್ತಾನೆ. ಅದಕ್ಕೆ ಪತ್ನಿ, ಇಲ್ಲ, ಇಲ್ಲ, ಅವಳು ನಿನ್ನನ್ನು ಮದುವೆಯಾಗುತ್ತಾಳೆ. ಎಲ್ಲಾ ಹುಡುಗಿಯರು ನಿನ್ನನ್ನು ಮದುವೆಯಾಗಲು ಸಾಯುತ್ತಿದ್ದಾರೆ ಎಂದು ಉತ್ತರಿಸುತ್ತಾಳೆ.
ಆಗ ಆತ, ನಟಿಯಾಗಿ ಆಕೆಯನ್ನು ಇಷ್ಟಪಡುತ್ತೇನೆ. ನಾನು ಯಾವುದೇ ನಟಿಯನ್ನು ಇಷ್ಟಪಡಬಾರದೇ ಎಂದು ಕೇಳುತ್ತಾನೆ. ಅದಕ್ಕೆ ಪತ್ನಿಯು, ಹಾಗಾದರೆ ನನ್ನನ್ನು ಕಿಯಾರಾ ಅಡ್ವಾಣಿ ಜೊತೆಗೆ ಯಾಕೆ ಹೋಲಿಸಿದ್ದೀರಿ, ನಾನು ನಟಿಯೇ ಎಂದು ಎಂದು ವ್ಯಂಗ್ಯವಾಡುತ್ತಾಳೆ.
ಅವಳು ಚೆನ್ನಾಗಿ ನಟಿಸುತ್ತಾಳೆ ಎಂದು ತನ್ನ ಹೇಳಿಕೆಗೆ ಸಮರ್ಥನೆಯನ್ನು ನೀಡಲು ಬಂದ ಪತಿಗೆ ಪತ್ನಿಯು ಇಲ್ಲಿಂದ ಹೊರಡಿ, ಇಂದು ನಿಮಗೆ ಊಟ ಸಿಗುವುದಿಲ್ಲ ಎಂದು ಹೇಳುತ್ತಾಳೆ. ಇದನ್ನೂ ಓದಿ: ಚೀನಾದೊಂದಿಗೆ ಲಿಂಕ್ – 200ಕ್ಕೂ ಅಧಿಕ ಸಾಲ, ಬೆಟ್ಟಿಂಗ್ ಆ್ಯಪ್‌ಗಳನ್ನು ಬ್ಯಾನ್ ಮಾಡಲಿದೆ ಭಾರತ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k