ಹಾಸನ: ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬ ಬಂದಿದ್ದ ಪರಿಹಾರದ ಹಣವನ್ನು (Money) ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ (Betting) ಕಳೆದುಕೊಂಡು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ (Hassan) ತಾಲೂಕಿನ ಅಟ್ಟಾವರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸ್ವರೂಪ್ (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೆಲ ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಸ್ವರೂಪ್ ಕಾಲು ಕಳೆದುಕೊಂಡಿದ್ದ. ಈ ವೇಳೆ ಬಂದಿದ್ದ ಪರಿಹಾರದ ಹಣವನ್ನು ಆತ ಕ್ರಿಕೆಟ್ ಬೆಟ್ಟಿಂಗ್‍ಗಾಗಿ ಅನ್ಸಾರ್, ತಿಪ್ಪೇಸ್ವಾಮಿ ಮತ್ತು ಬಾಳಪ್ಪ ಎಂಬವರಿಗೆ ನೀಡಿದ್ದ ಎನ್ನಲಾಗಿದೆ. ಇವರು ಹಣಪಡೆದು ವಂಚಿಸಿದ್ದು, ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಭೂಕಂಪ – 144ಕ್ಕೇರಿದ ಸಾವಿನ ಸಂಖ್ಯೆ; ತುರ್ತು ಪರಿಸ್ಥಿತಿ ಘೋಷಣೆ
ಕಾಲು ಕಳೆದುಕೊಂಡ ಬಳಿಕ ಮನೆಯಲ್ಲೇ ಇರುತ್ತಿದ್ದ ಸ್ವರೂಪ್, ಚಿಕಿತ್ಸೆಗಾಗಿ ಸಾಲ ಸಹ ಮಾಡಿಕೊಂಡಿದ್ದ. ಸಾಲ ಮರು ಪಾವತಿಸುವಂತೆ ಸಾಲ ಕೊಟ್ಟವರು ತ್ತಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.
ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಭೀಕರ ಭೂಕಂಪ – ಮ್ಯಾನ್ಮಾರ್‌ಗೆ ಸಹಾಯ ಹಸ್ತ ಚಾಚಿದ ಭಾರತ