ತುಮಕೂರು: ಭೋಲೋ ಭಾರತ್ ಮಾತಾ ಕೀ ಜೈ ಅಂತ ಹೇಳಿ ವ್ಯಕ್ತಿಯೊಬ್ಬರು ನೇಣಿಗೆ ಶರಣಾದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕೆ.ಕೆ.ಪಾಳ್ಯದಲ್ಲಿ ನಡೆದಿದೆ.
36 ವರ್ಷದ ನಿರಂಜನ್ ಮರಕ್ಕೆ ನೇಣು ಬಿಗಿದುಕೊಂಡಿದ್ದು, ಫೇಸ್‍ಬುಕ್ ಲೈವ್ ಮಾಡಿದ್ದಾರೆ. ಕೌಟುಂಬಿಕ ವಿಚಾರಕ್ಕೆ ಮನನೊಂದು ನಿರಂಜನ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೂ ಮುನ್ನ ನಿರಂಜನ್ ಲೈವ್ ಗೆ ಬಂದು ಹೆಣ್ಣನ್ನು ನಂಬಬೇಡಿ, ಮೋಸಗಾರರ ಪ್ರಪಂಚದಲ್ಲಿ ನ್ಯಾಯವಾಗಿ ಬದುಕೋಕಾಗಲ್ಲ ಅಂತ ಹೇಳಿದ್ದಾರೆ.
ಲೈವ್ ನಲ್ಲಿ ಏನಿದೆ?:
ತಂದೆ ಬಿಟ್ಟರೆ ಯಾರೂ ಸರಿ ಇಲ್ಲ. ಎಲ್ಲರು ಮೋಸಗಾರರು. ಯಾರನ್ನೂ ನಂಬಬೇಡಿ. ಅದ್ರಲ್ಲೂ ಹೆಂಗಸರು ತುಂಬಾ ಮೋಸ ಮಾಡ್ತಾರೆ. ಮೋಸ ಮಾಡ್ತಾಲೇ ಇರುತ್ತಾರೆ. ಅವರಿಗೆ ನಿಯತ್ತೇ ಇಲ್ಲ. ನಾವು ಹೆಂಗಸರನ್ನ ದೇವತೆಯಂತೆ ಪೂಜೆ ಮಾಡುತ್ತೇವೆ. ಆದ್ರೆ ನೋ ಯೂಸ್. ಗಿಲ್ಟಿ ಶುಡ್ ಬಿ ಫನಿಶ್ ಡ್ ಅಂತ ಹೇಳುತ್ತಾರೆ. ಆದ್ರೆ ಇದು ಈ ಭಾರತ ದೇಶದಲ್ಲಿ ಎಲ್ಲಿದೆ. ದುಡ್ಡಿದ್ದರೆ ಎಲ್ಲಾ ನಡೆಯುತ್ತದೆ. ನಿಯತ್ತಾಗಿ ಇರೋದು ಯಾವುದು ನಡೆಯಲ್ಲ. ಈ ಪ್ರಪಂಚದಲ್ಲಿ ದುಡ್ಡೇ ಮುಖ್ಯ. ಸೋ ಐ ವಾಂಟ್ ಟು ಬಿ ಡೈಡ್.. ನೋ ಮೋರ್ ಸೇಫ್ ಎನಿಬಡಿ ಇಂಡಿಯನ್.. ನೋ.. ನೋ ಮೋರ್… ಐ ಆ್ಯಮ್ ನಾಟ್ ಮೋರ್…ಭೋಲೋ ಭಾರತ್ ಮಾತಾ ಕೀ.. ಜೈ…
ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv