ಮುಂಬೈ: ಮದುವೆ ಹಿಂದಿನ ದಿನ ವಧು ತನ್ನ ಪ್ರಿಯಕರನ ಜೊತೆ ಓಡಿ ಹೋಗಿದಕ್ಕೆ ವರ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಅಮ್ರಾವತಿಯಲ್ಲಿ ನಡೆದಿದೆ.
ಸುಖ್‍ದೇವ್ ಶ್ಯಾಮ್‍ಲಾಲ್ ಕಾವಾಲೆ (26) ಆತ್ಮಹತ್ಯೆ ಮಾಡಿಕೊಂಡ ವರ. ಸುಖ್‍ದೇವ್ ಖಂಡಾಲಿ ನಿವಾಸಿಯಾಗಿದ್ದು, ವಧುವಿನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದನು. ಆದರೆ ಮದುವೆ ಹಿಂದಿನ ದಿನ ವಧು ತನ್ನ ಪ್ರಿಯಕರನ ಜೊತೆ ಓಡಿ ಹೋಗಿದ್ದಳು.
ವಧು ತನ್ನ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ ಎಂಬ ಸುದ್ದಿ ಕೇಳಿ ಸುಖ್‍ದೇವ್ ಆಘಾತಕ್ಕೆ ಒಳಗಾಗಿದ್ದ. ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಸುಖ್‍ದೇವ್ ಹೊಲಕ್ಕೆ ಹೋಗಿ ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸುಖ್‍ದೇವ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್‍ನೋಟ್ ಬರೆದಿದ್ದಾನೆ. ಅದರಲ್ಲಿ “ನನ್ನ ಸಾವಿಗೆ ನನ್ನ ವಧು, ಆಕೆಯ ಪ್ರಿಯಕರ, ಆಕೆಯ ಸಹೋದರಿ ಹೇಮಾ ಹಾಗೂ ಸಹೋದರ ರೋಹಿತ್ ಕಾರಣ” ಎಂದು ಬರೆದಿದ್ದಾನೆ.
ಸುಖ್‍ದೇವ್ ಡೆತ್‍ನೋಟ್ ನೋಡಿದ ಆತನ ಶ್ಯಾಮ್ ಲಾಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಸುಖ್‍ದೇವ್ ಡೆತ್‍ನೋಟ್‍ನಲ್ಲಿ ಉಲ್ಲೇಖಿಸಿದ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv