ಬಾಯಾರಿಕೆಯಾಗಿದ್ದ ಬೀದಿನಾಯಿಗೆ ವೃದ್ಧರೊಬ್ಬರು ತನ್ನ ಕೈಯಲ್ಲಿ ನೀರು ತುಂಬಿಸಿ ಕುಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸುಶಾಂತ್ ನಂದ ಎಂಬವರು ತಮ್ಮ ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಟ್ವೀಟ್ ಮಾಡಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, ಏನ್ನನ್ನು ಬಯಸೇ ಒಬ್ಬರಿಗೆ ಸಹಾಯ ಮಾಡಿ. ಜೀವನದಲ್ಲಿ ಇನ್ನೊಬ್ಬರಿಗೆ ದಯೆ ತೋರಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯಾರೋ ಎಸೆದ ಚಪಾತಿಯನ್ನು ನೀರಿನಲ್ಲಿ ತೊಳೆದು ತಿಂದ ವೃದ್ಧ
You have not lived ur day, until you have done something for someone who can never repay you????????
Be compassionate in what you today. pic.twitter.com/SK7zXjCxnc
— Susanta Nanda (@susantananda3) February 25, 2020
ವಿಡಿಯೋದಲ್ಲಿ ವೃದ್ಧ ಫುಟ್ಪಾತ್ ಬಳಿಯಿದ್ದ ನಲ್ಲಿಯಿಂದ ತನ್ನ ಕೈಯಲ್ಲಿ ನೀರು ತುಂಬಿಸಿಕೊಂಡು ಅದನ್ನು ಬಾಯಾರಿಕೆಯಿಂದ ಇದ್ದ ನಾಯಿಗೆ ಕುಡಿಸಿದ್ದಾರೆ. ವೃದ್ಧ ನಾಯಿಗೆ ನೀರು ಕುಡಿಸುವಾಗ ಯಾರೋ ಅದನ್ನು ವಿಡಿಯೋ ಮಾಡಿದ್ದಾರೆ. ಇದನ್ನೂ ಓದಿ: ಬೀದಿ ನಾಯಿಗೆ ಬೊಗಸೆಯಲ್ಲಿ ನೀರು ಕುಡಿಸಿದ ವ್ಯಕ್ತಿ
ವೈರಲ್ ಆಗಿರುವ ಈ ವಿಡಿಯೋ ಹಲವು ಮಂದಿಗೆ ಇಷ್ಟವಾಗಿದ್ದು, ಇದನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋಗೆ 10 ಸಾವಿರಕ್ಕೂ ಹೆಚ್ಚು ವ್ಯೂವ್ ಬಂದಿದ್ದು, ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಸದ್ಯ ಈ ವಿಡಿಯೋವನ್ನು ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಮಾಹಿತಿ ದೊರೆತಿಲ್ಲ.
Humanity is alive
— সুদীপ্ত গুহ (@sudiptaguha19) February 25, 2020
ಅಲ್ಲದೆ ವಿಡಿಯೋ ನೋಡಿ ಹಲವು ಮಂದಿ ರೀ-ಟ್ವೀಟ್ ಮಾಡುವ ಮೂಲಕ ವೃದ್ಧನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ವಿಡಿಯೋ ತುಂಬಾನೇ ಕ್ಯೂಟ್ ಆಗಿದೆ ಎಂದು ರೀ-ಟ್ವೀಟ್ ಮಾಡುತ್ತಿದ್ದಾರೆ.