ಲಕ್ನೋ: 25ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದ ವೇದಿಕೆಯಲ್ಲಿ ಕುಣಿಯುತ್ತಿದ್ದ ಪತಿ ಹೃದಯಾಘಾತದಿಂದ(Heartattack) ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ(Uttara Pradesh) ಬರೇಲಿಯಲ್ಲಿ ನಡೆದಿದೆ.
ಶೂ ವ್ಯಾಪಾರಿ ವಾಸಿಮ್ ಸರ್ವತ್ (50) ಮೃತ ದುರ್ದೈವಿ. ಮೃತ ವಾಸಿಮ್ ಅವರು ಪತ್ನಿ ಫರಾ ಜೊತೆ ಬೆಳ್ಳಿ ಮಹೋತ್ಸವದ ಸಲುವಾಗಿ ಆಯೋಜಿಸಿದ್ದ ಪಾರ್ಟಿಯಲ್ಲಿ ನೃತ್ಯ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಇದನ್ನೂ ಓದಿ: ಸಂಜನಾ ಗಲ್ರಾನಿ ಮತ್ತೆ ಗರ್ಭಿಣಿ – 2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ
ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಾಸಿಮ್ ಅವರು ವೇದಿಕೆಯಲ್ಲಿ ಪತ್ನಿಯೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ವಾಸಿಮ್ ಏಕಾಏಕಿ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಇದನ್ನೂ ಓದಿ: ನಾನಿನ್ನೂ ಸಿಂಗಲ್, ಮದ್ವೆಯಾಗಲು ನಾನು ಬಯಸುವವರ ಜೊತೆ ಮಾತ್ರ ಡೇಟಿಂಗ್ – ಚಹಲ್ ಜೊತೆ ಕಾಣಿಸಿಕೊಂಡ ಬ್ಯೂಟಿ ಸ್ಪಷ್ಟನೆ