ಲಂಡನ್: ಪಿಜ್ಜಾ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಡಯಟ್ ಮಾಡುವವರು, ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಪಿಜ್ಜಾ ತಿನ್ನುವುದನ್ನು ಬಿಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಪಿಜ್ಜಾ (Pizza) ತಿಂದು ತೂಕವನ್ನು (Weight) ಕಳೆದುಕೊಂಡಿದ್ದಾನೆ.
ಉತ್ತರ ಐರ್ಲೆಂಡ್‍ನ ರಿಯಾನ್ ಮರ್ಸರ್ ಎಂಬಾತ ತೂಕ ಇಳಿಸಿಕೊಂಡ ವ್ಯಕ್ತಿ. ಈತ ವೃತ್ತಿಯಲ್ಲಿ ತರಬೇತುದಾರನಾಗಿದ್ದು, 30 ದಿನಗಳ ಚಾಲೆಂಜ್‍ನಲ್ಲಿ ದಿನಕ್ಕೆ 10 ಸ್ಲೈಸ್ ಪಿಜ್ಜಾವನ್ನು ತಿನ್ನುತ್ತಾನೆ. ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೂ ಪಿಜ್ಜಾವನ್ನೇ ಸೇವಿಸುತ್ತಾ ತನ್ನ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾನೆ.
Advertisement
Advertisement
ಈತ ತನ್ನ 30 ದಿನಗಳ ಚಾಲೆಂಜ್‍ಗಾಗಿ ಪಿಜ್ಜಾವನ್ನು ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ತಿಂಡಿಯನ್ನು ತಿನ್ನುವುದನ್ನು ತ್ಯಜಿಸಿದ. ಕ್ಯಾಲೋರಿ ಕೊರತೆ ಮತ್ತು ಆರೋಗ್ಯದ ಬಗ್ಗೆ ಒಂದು ಅಂಶವನ್ನು ಗಮನಿಸಲು ಸ್ವತಃ ಪಿಜ್ಜಾಗಳನ್ನು ತಿನ್ನಲು ಪ್ರಾರಂಭಿಸಿದ. ಆದರೆ ಈತನಿಗೆ ಕೊಬ್ಬನ ಬದಲು ಮಸಲ್ಸ್ ಬಂದಿದೆ.
Advertisement
ಹಣ್ಣುಗಳು ಮತ್ತು ತರಕಾರಿಗಳೊಂದಿಗೆ ಸಾಕಷ್ಟು ಪ್ರೊಟೀನ್ ಹೊಂದಿರುವ ತನ್ನ ವಿಶಿಷ್ಟವಾದ ಆಹಾರ ಕ್ರಮವನ್ನು ರಿಯಾನ್ ವಿವರಿಸಿದ್ದಾನೆ. ಈತನೇ ಹೇಳುವ ಪ್ರಕಾರ ನಾನು ದಿನಕ್ಕೆ ಸಣ್ಣ ಗಾತ್ರದ ಎರಡು ಪಿಜ್ಜಾಗಳು ಮತ್ತು ಒಂದು ದೊಡ್ಡ ಗಾತ್ರದ ಪಿಜ್ಜಾವನ್ನು ತಿನ್ನುತ್ತೇನೆ. ಇದು ದಿನಕ್ಕೆ ಸರಿಸುಮಾರು 10 ಸ್ಲೈಸ್‍ಗಳಿಗೆ ಸಮನಾಗಿರುತ್ತದೆ ಎಂದು ತಿಳಿಸಿದನು. ಇದನ್ನೂ ಓದಿ: ಶಾಲಾ ಮಕ್ಕಳ ಜೊತೆ ಕೂತು ಬಿಸಿಯೂಟ ಸವಿದ ಸಿಪಿವೈ
Advertisement
ರಿಯಾನ್‍ಗೆ ಅಚ್ಚುಮೆಚ್ಚಿನ ಆಹಾರಗಳಲ್ಲಿ ಪಿಜ್ಜಾವೂ ಒಂದಾಗಿದೆ. ಇದರಿಂದಾಗಿ ಆತ ಇಡೀ ತಿಂಗಳು ಪಿಜ್ಜಾವನ್ನು ಸಂತೋಷದಿಂದಲೇ ತಿಂದಿದ್ದಾನೆ. ಅಷ್ಟೇ ಅಲ್ಲದೇ ವಿವಿಧ ರೀತಿಯ ಪಿಜ್ಜಾಗಳನ್ನು ತಿನ್ನುವ ಮೂಲಕ ವಿವಿಧ ರೀತಿಯ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತಿದ್ದಾನಂತೆ. ಇದನ್ನೂ ಓದಿ: ಕೇಸರಿ ಭದ್ರಕೋಟೆಗೆ ಚಾಣಕ್ಯ: ಮಂಗಳೂರಿನಲ್ಲಿ ಶಾ ಚುನಾವಣ ರಣತಂತ್ರ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k