ವಾಷಿಂಗ್ಟನ್: ತನ್ನ ಸ್ವಂತ ಮಗಳು ಸೇರಿದಂತೆ 20ಕ್ಕೂ ಹೆಚ್ಚು ಯುವತಿಯರನ್ನ ಮದುವೆಯಾಗಿರುವ (Marriage) ಆರೋಪದ ಮೇಲೆ ಯುಎಸ್‌ನ (US) ಸ್ವಯಂ ಘೋಷಿತ ಪ್ರವಾದಿಯನ್ನು (Prophet) ಎಫ್‌ಬಿಐ (FBI) (ಫೆಡರಲ್ ಬ್ಯೂರೋ ಇನ್ವೆಷ್ಟಿಗೇಷನ್) ಬಂಧಿಸಿದೆ. ಯುಎಸ್ (US) ಮೂಲದ ಆಧ್ಯಾತ್ಮಿಕ ನಾಯಕನ ಬಹುಪತ್ನಿತ್ವ ಬೆಚ್ಚಿಬೀಳಿಸುವಂತೆ ಮಾಡಿದೆ.
Advertisement
ಲೇಟರ್ ಡೇ ಸೇಂಟ್ಸ್ ಜೀಸಸ್ ಕ್ರೈಸ್ಟ್ ಚರ್ಚ್ನಲ್ಲಿ ಬಹುಪತ್ನಿತ್ವವಾದಿ `ಮೊರನ್ಸ್’ ಗುಂಪಿನ ಆರಾಧಕನಾಗಿದ್ದ ಸ್ಯಾಮ್ಯುಯೆಲ್ ರಾಪ್ಪಿಲೀ ಬೇಟ್‌ಮ್ಯಾನ್ (46) ತನ್ನ ಸ್ವಂತ ಮಗಳು ಸೇರಿ 20ಕ್ಕೂ ಹೆಚ್ಚು ಯುವತಿಯರನ್ನ ಮದುವೆಯಾಗಿದ್ದಾನೆ. ಅವರಲ್ಲಿ ಬಹುತೇಕರು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ ಎಂದು ಎಫ್‌ಬಿಐ ಹೇಳಿದೆ. ಇದನ್ನೂ ಓದಿ: ಕ್ಯಾಚ್ ಕೈಚೆಲ್ಲಿದ ಸುಂದರ್‌ಗೆ ಕೆಟ್ಟದಾಗಿ ಬೈದ ರೋಹಿತ್ – ನೆಟ್ಟಿಗರ ಆಕ್ರೋಶ
Advertisement
Advertisement
2019ರಲ್ಲಿ ಸಣ್ಣ ಗುಂಪಿನ ಅನುಯಾಯಿಗಳ ನಿಯಂತ್ರಣ ವಹಿಸಿಕೊಂಡ ಬೇಟ್‌ಮ್ಯಾನ್ ನಂತರದಲ್ಲಿ ತನ್ನನ್ನೇ ತಾನು ಪ್ರವಾದಿ ಎಂದು ಘೋಷಿಸಿಕೊಂಡನು. ಆಮೇಲೆ ಹದಿಹರೆಯದ ಮಗಳನ್ನು ಮದುವೆಯಾಗುವುದಾಗಿ ಘೋಷಿಸಿದನು. ನಂತರ ಅನೇಕ ಅಪ್ರಾಪ್ತೆಯರನ್ನೂ ವಿವಾಹವಾದನು. ಎಫ್‌ಬಿಐ (FBI) ಕೊಲೊರಾಡೋ ನಗರದಲ್ಲಿನ ಬೇಟ್‌ಮ್ಯಾನ್ ಎರಡೂ ಮನೆಗಳ ಮೇಲೆ ದಾಳಿ ನಡೆಸಿದಾಗ ಈ ಸತ್ಯ ಬಹಿರಂಗವಾಗಿದೆ.
Advertisement
ಸದ್ಯ ದಾಖಲೆಗಳ ಸಮೇತ ಆರೋಪಿಯನ್ನ ಬಂಧಿಸಿ ಜೈಲಿನಲ್ಲಿಡಲಾಗಿದೆ. ಇದನ್ನೂ ಓದಿ: ಕ್ಯಾಚ್ ಕೈಚೆಲ್ಲಿದ ಸುಂದರ್‌ಗೆ ಕೆಟ್ಟದಾಗಿ ಬೈದ ರೋಹಿತ್ – ನೆಟ್ಟಿಗರ ಆಕ್ರೋಶ