– ಇಬ್ಬರೂ ಒಟ್ಟಿಗೆ ಇರಲು ಮಾಡಿಕೊಂಡಿದ್ದ ಒಪ್ಪಂದದ ದಾಖಲೆ ಕೋರ್ಟ್ ಮುಂದಿಟ್ಟು ಶಾಕ್ ಕೊಟ್ಟ ಸಂಗಾತಿ
ಮುಂಬೈ: ಸಂಗಾತಿ ತನ್ನ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧನದಿಂದ ಪಾರಾಗಲು ವ್ಯಕ್ತಿಯೊಬ್ಬ ಲಿವ್-ಇನ್ ರಿಲೇಷನ್‌ಶಿಪ್ ಒಪ್ಪಂದ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಘಟನೆ ನಡೆದಿದೆ.
Advertisement
ಮುಂಬೈನಲ್ಲಿ 46 ವಯಸ್ಸಿನ ವ್ಯಕ್ತಿ ವಿರುದ್ಧ 29ರ ಆತನ ಸಂಗಾತಿ ಅತ್ಯಾಚಾರ ಆರೋಪ ಮಾಡಿ ದೂರು ನೀಡಿದ್ದಳು. ಪ್ರಕರಣದಲ್ಲಿ ಬಂಧನದಿಂದ ಪಾರಾಗಲು ಆರೋಪಿ, ತಮ್ಮಿಬ್ಬರ ನಡುವಿನ ಲಿವ್-ಇನ್ ಸಂಬಂಧದ ಒಪ್ಪಂದ ಪತ್ರವನ್ನು ಕೋರ್ಟ್‌ಗೆ ಸಲ್ಲಿಸಿದ್ದ. ಇದನ್ನು ಪರಿಗಣಿಸಿದ ನ್ಯಾಯಾಲಯ, ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದೆ. ಆದರೆ ಈ ದಾಖಲೆಯಲ್ಲಿರುವ ಸಹಿ ನನ್ನದಲ್ಲ ಎಂದು ಮಹಿಳೆ ಕೋರ್ಟ್‌ಗೆ ತಿಳಿಸಿದ್ದಾಳೆ.
Advertisement
ಮಹಿಳೆ ವಯಸ್ಸಾದವರ ಆರೈಕೆ ಮಾಡುವವರಾಗಿ ಕೆಲಸ ಮಾಡುತ್ತಿದ್ದಳು. ಆರೋಪಿ ಸರ್ಕಾರಿ ನೌಕರ. ಇದೀಗ, ಇವರಿಬ್ಬರ ಲಿವ್-ಇನ್ ಸಂಬಂಧದ ಒಪ್ಪಂದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ನನ್ನ ಸಂಗಾತಿ ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಒಟ್ಟಿಗೆ ವಾಸಿಸುತ್ತಿದ್ದ ಸಮಯದಲ್ಲಿ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಆರೋಪಿ ಪರ ವಾದ ಮಂಡಿಸಿದ ವಕೀಲರು ಇದನ್ನು ವಂಚನೆ ಪ್ರಕರಣ ಎಂದು ಕರೆದಿದ್ದಾರೆ.
Advertisement
ಇಬ್ಬರ ನಡುವಿನ ಏಳು ಅಂಶಗಳ ಒಪ್ಪಂದದ ಪ್ರಕಾರ, ಅವರು ಆಗಸ್ಟ್ 1 2024 ರಿಂದ ಜೂನ್ 30, 2025 ರವರೆಗೆ ಒಟ್ಟಿಗೆ ಇರಲು ನಿರ್ಧರಿಸಿದ್ದರು. ಈ ಅವಧಿಯಲ್ಲಿ ಪರಸ್ಪರ ಲೈಂಗಿಕ ಕಿರುಕುಳದ ಯಾವುದೇ ಪ್ರಕರಣವನ್ನು ದಾಖಲಿಸುವುದಿಲ್ಲ. ಶಾಂತಿಯುತವಾಗಿ ಇಬ್ಬರೂ ಒಟ್ಟಿಗೆ ಇರುವುದು ಎಂದು ಷರತ್ತು ಕೂಡ ಹಾಕಿಕೊಂಡಿರುವುದು ದಾಖಲೆಯಲ್ಲಿದೆ.
ವ್ಯಕ್ತಿಯಲ್ಲಿ ದುರ್ವರ್ತನೆ ಕಂಡುಬಂದರೆ ಯಾವುದೇ ಸಮಯದಲ್ಲಿ ಇಬ್ಬರೂ ಬೇರ್ಪಡಬಹುದು. ಮಹಿಳೆ ಸಂಬಂಧಿಕರು ಇವರಿಬ್ಬರು ಇರುವ ಮನೆಗೆ ಬರುವಂತಿಲ್ಲ. ಈ ಅವಧಿಯಲ್ಲಿ ಮಹಿಳೆ ಗರ್ಭಿಣಿಯಾದರೆ ಅದಕ್ಕೆ ಸಂಗಾತಿ ಜವಾಬ್ದಾರನಲ್ಲ ಎಂದು ಹಲವು ಷರತ್ತುಗಳಿಗೆ ಒಪ್ಪಿ ಇಬ್ಬರೂ ಸಹಿ ಹಾಕಿರುವುದು ದಾಖಲೆಯಲ್ಲಿದೆ.