ಮೈಸೂರು: ಮನೆಯಲ್ಲಿ ಕುಳಿತು ಕೆಲಸ ಮಾಡಿ ಸಾವಿರಾರು ರೂ. ಗಳಿಸಿರಿ ಎಂದು ನಿರುದ್ಯೋಗಿಗಳಾಗಿರುವ ಯುವಕ -ಯುವತಿಯರಿಗೆ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಘಟನೆ ಮೈಸೂರಲ್ಲಿ ನಡೆದಿದೆ.
ಕಾರ್ತಿಕ್ ಶರವಣ್ ಮೋಸ ಮಾಡಿದ ಯುವಕ. ಕಾರ್ತಿಕ್ ಮೂಲತಃ ಶಿವಮೊಗ್ಗ ಜಿಲ್ಲೆಯವನಾಗಿದ್ದು, ನಿರುದ್ಯೋಗ ಯುವಕ ಯುವತಿಯರು, ಗೃಹಿಣಿಯರನ್ನು ಟಾರ್ಗೆಟ್ ಮಾಡಿಕೊಂಡಿದ್ದನು. ಒಂದು ಸಾವಿರ ಮುನ್ನೂರು ರೂಪಾಯಿ ಕಟ್ಟಿ ಮನಿ ಪ್ಲಾಂಟ್ ಸ್ಕೀಂ ಸೇರ್ಪಡೆ ಆಗಬೇಕು. ನಂತರ ಅದಕ್ಕೆ ಇನ್ನು 50 ಜನರ ಸೇರಿಸಿದ್ರೆ ಪ್ರತಿ ತಿಂಗಳೂ ಸಾವಿರಾರು ರೂಪಾಯಿ ನಿಮ್ಮ ಕೈ ಸೇರುತ್ತೆ ಎಂದು ನಂಬಿಸಿದ್ದೇನೆ.
Advertisement
Advertisement
ಕಾರ್ತಿಕ್ ಮಾತು ನಂಬಿ ನೂರಾರು ಯುವಕರು ಈ ಮನಿ ಪ್ಲಾಂಟ್ ಮೆಂಬರ್ ಆಗಿ ನಂತರ ಅವರು ಬಹಳಷ್ಟು ಸದಸ್ಯರನ್ನು ಇದಕ್ಕೆ ಮೆಂಬರ್ ಮಾಡಿದ್ದಾರೆ. ಇದೆಲ್ಲದರಿಂದ ಕಾರ್ತಿಕ್‍ಗೆ ಇವರೆಗೂ 30 ಲಕ್ಷ ರೂ. ಹಣ ಸಿಕ್ಕಿದೆ. ಎಲ್ಲರಿಗೂ ಲ್ಯಾಪ್‍ಟಾಪ್ ಕೊಡಿಸುತ್ತೇನೆ, ಡಾಂಗಲ್ ಕೊಡಿಸುತ್ತೇನೆ ಎಂದು ಹೇಳಿ ವಾಟ್ಸಾಪ್ ಗ್ರೂಪ್ ಕೂಡ ಮಾಡಿದ್ದನು.
Advertisement
ಅಲ್ಲದೆ ಕಾರ್ತಿಕ್ ಮೈಸೂರಿನ ಪ್ರತಿಷ್ಠಿತ ಹೋಟೆಲಿನಲ್ಲಿ ಹೈಟೆಕ್ ಟ್ರೈನಿಂಗ್ ಕೂಡ ಕೊಟ್ಟಿದ್ದನು. ಇದನ್ನು ನಂಬಿ ಸಾವಿರಾರು ಜನರು ಹಳ್ಳಕ್ಕೆ ಬಿದ್ದಿದ್ದಾರೆ. ದೊಡ್ಡ ಮಟ್ಟದ ಹಣ ಕೈಗೆ ಸಿಗುತ್ತಿದ್ದಂತೆ ಕಾರ್ತಿಕ್ ಮೊಬೈಲ್ ಸ್ವಿಚ್‍ಆಫ್ ಮಾಡಿ ಪರಾರಿಯಾಗಿದ್ದನು. ನಾಲ್ಕು ತಿಂಗಳ ಬಳಿಕ ಮೋಸ ಹೋದವರ ಕೈಗೆ ಕಾರ್ತಿಕ್ ಸಿಕ್ಕಿಬಿದ್ದಿದ್ದಾನೆ.
Advertisement
ಸದ್ಯ ಕಾರ್ತಿಕ್‍ನನ್ನು ಮೈಸೂರಿನ ವಿಜಯನಗರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.