ಹುಬ್ಬಳ್ಳಿ(ಧಾರವಾಡ): ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಅಂತ ಹೇಳಿಕೊಂಡು ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಎಲೆಕ್ಟ್ರಿಕ್ ಮಾಲೀಕರು ಹಾಗೂ ಸೇಲ್ಸ್ ಮ್ಯಾನೇಜರ್ ಗಳಿಗೆ ಕೋಟ್ಯಂತರ ರೂ. ಮೋಸ ಮಾಡಿ ಪರಾರಿಯಾಗಿದ್ದಾನೆ.
ಸುರೇಶ್ ದೇಸಾಯಿ ಲೋಕೋಪಯೋಗಿ ಎಂದು ಮೋಸ ಮಾಡಿದವನು. ಈತನ ಜೊತೆಗೆ ಸುಮಾರು ಮಂದಿ ಸೇರಿಕೊಂಡು ಮೋಸ ಮಾಡಿದ್ದಾರೆ. ಅಂದಹಾಗೇ ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಕಂಪನಿ ಹಾಗೂ ಶೋ ರೂಂ ಗಳ ಸೇಲ್ಸ್ ಮ್ಯಾನೆಜರ್ ಗಳು ಕಳೆದ ವರ್ಷ ಸುರೇಸ್ ದೇಸಾಯಿನಿಗೆ ಕೋಟ್ಯಂತರ ಬೆಲೆ ಬಾಳುವ ಎಲೆಕ್ಟ್ರಿಕ್ ವಸ್ತುಗಳನ್ನು ಮಾರಿದ್ದಾರೆ.
Advertisement
Advertisement
ಸುರೇಶ್ ದೇಸಾಯಿ ಲೋಕೋಪಯೋಗಿ ಕಾಂಟ್ರಕ್ಟರ್ ಆಗಿದ್ದು, ಆತನ ಹೆಸರಿನಲ್ಲಿ ಜಿಎಸ್ ಟಿ ಹಾಗೂ ಟಿನ್ ನಂಬರ್ ಸಹಿತ ಬಿಲ್ ಗಳು ಇದೆ. ಹೀಗಾಗಿ ಆತನನ್ನು ನಂಬಿ ಸುಮಾರು 1 ಕೋಟಿ 24 ಲಕ್ಷ ಮೌಲ್ಯದ ಎಲೆಕ್ಟ್ರಿಕ್ ಹಾಗೂ ಇನ್ನಿತರ ವಸ್ತುಗಳನ್ನ ಮಾರಾಟ ಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ಮಾತ್ರ ಬಿಲ್ ಬಂದಿಲ್ಲ. ಬದಲಾಗಿ ಆತ ಎಲ್ಲಿದ್ದಾನೆ ಎನ್ನೋದು ಹುಡುಕುವುದೇ ದೊಡ್ಡ ತಲೆನೋವಾಗಿದೆ. ಇತ್ತ ಕಂಪನಿಗಳು ಸೇಲ್ಸ್ ಮ್ಯಾನೆಜರ್ ಗಳ ಸಂಬಳ ಕಟ್ ಮಾಡುತ್ತಿದ್ದಾರೆ ಎಂದು ಏಜೆನ್ಸಿ ಮಾಲೀಕ ಹೇಳಿದ್ದಾರೆ.
Advertisement
ಹುಬ್ಬಳ್ಳಿ ನಗರದ ಪವನ್ ಅಸೋಶಿಯೇಟ್ಸ್, ಶ್ರೀ ಎಂಟರ್ ಪ್ರೈಸಸ್, ಹೆಗಡೆ ಏಜೆನ್ಸಿ, ಸಪ್ನಾ ಪ್ಲೈವುಡ್, ಸ್ಕಾಯ್ ಟೆಕ್ ಕಂಪ್ಯೂಟರ್ ಸೇರಿದಂತೆ 11 ಶೋ ರೂಂಗಳಿಗೆ ಈತ ಉಂಡೇ ನಾಮ ಹಾಕ್ಕಿದ್ದಾನೆ. ಅದರಲ್ಲೂ ಕೆಲವರಂತು ಅಂಗಡಿಯನ್ನೇ ಮುಚ್ಚಿದ್ದಾರೆ. ವಿವಿಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರೂ ಸಹ ಪೊಲೀಸರು ಆರೋಪಿಯನ್ನು ಪತ್ತೆ ಮಾಡುತ್ತಿಲ್ಲ ಅಂತ ಸೇಲ್ಸ್ ಮ್ಯಾನೇಜರ್ ನಾಗನಗೌಡ ಪಾಟೀಲ್ ತಿಳಿಸಿದ್ದಾರೆ.
Advertisement
ಸದ್ಯಕ್ಕೆ ಪೊಲೀಸರು ನಾವು ತನಿಖೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಶೀಘ್ರವೇ ಖತರ್ನಾಕ್ ಮೋಸಗಾರನನ್ನ ಬಂಧಿಸಿ ನಮಗೆ ನ್ಯಾಯ ಕೊಡಿಸಬೇಕು ಎಂದು ನೊಂದವರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv