ಮುಂಬೈ: 42 ವರ್ಷದ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ವಿಕಲಚೇತನ ಹುಡುಗಿಯನ್ನು ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಆರೋಪಿಯನ್ನು ಜೋಗೇಶ್ವರಿ ನಿವಾಸಿ ರಾಜೇಶ್ ಪಟೇಲ್ ಎಂದು ಗುರುತಿಸಲಾಗಿದ್ದು, ಆತನನ್ನು ಜೋಗೇಶ್ವರಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯ ತಂದೆ ಪೊಲೀಸ್ ಠಾಣೆಗೆ ಬಂದು, ನನ್ನ ಮಗಳ ವಿಕಲಚೇತನ ಪರಿಸ್ಥಿತಿಯ ಅನುಕೂಲವಾಗಿ ಬಳಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪಟೇಲ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಪ್ರಿಂಟಿಂಗ್ ಪ್ರೆಸ್ ಕಚೇರಿಯಲ್ಲಿ ಆರೋಪಿ ಭೇಟಿಯಾಗಿದ್ದನು. ಆರೋಪಿ ಪಟೇಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಎರಡು ವರ್ಷಗಳ ಹಿಂದೆ ಕೆಲಸವನ್ನು ಬಿಟ್ಟಿದ್ದನು. ಆರೋಪಿ ಪಟೇಲ್ ಮತ್ತು ಸಂತ್ರಸ್ತೆ ಇಬ್ಬರು ಆರು ತಿಂಗಳುಗಳಿಂದ ಪರಿಚಯಸ್ಥರಾಗಿದ್ದರು. ಹೀಗಾಗಿ ಒಂದು ದಿನ ಆರೋಪಿ ಸಂತ್ರಸ್ತೆಗೆ ನಾನು ನಿನ್ನನ್ನು ಪ್ರೀತಿಸುತ್ತಿದ್ದು, ಮದುವೆಯಾಗುತ್ತೇನೆ. ನಿನ್ನನ್ನು ಖಷಿಯಾಗಿರುವಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿ ನಂಬಿಸಿದ್ದನು.
Advertisement
ಇತ್ತೀಚೆಗೆ ಸಂತ್ರಸ್ತೆ ಆಫೀಸ್‍ನಲ್ಲಿ ಸ್ವಲ್ಪ ಕೆಲಸವಿದೆ ಎಂದು ಪೋಷಕರಿಗೆ ಹೇಳಿ ಹೋಗಿದ್ದಾಳೆ. ಆದರೆ ದಾರಿಯಲ್ಲಿ ಪಟೇಲ್ ಸಿಕ್ಕಿದ್ದು, ಆತ ಆಕೆಯನ್ನು ಬೈಕಿನಲ್ಲಿ ಥಾಣೆಯಲ್ಲಿರುವ ವಜ್ರೇಶ್ವರಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಇಬ್ಬರು ಮದುವೆಯಾಗಿದ್ದಾರೆ. ಅಲ್ಲಿಂದ ನೇರವಾಗಿ ಆತ ಆಕೆಯನ್ನು ಲಾಡ್ಜ್‌ಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡು ಈ ಬಗ್ಗೆ ಮನೆಯಲ್ಲಿ ಯಾರಿಗೂ ಹೇಳಬಾರದು ಎಂದು ಬೆದರಿಕೆ ಒಡ್ಡಿದ್ದಾನೆ.
Advertisement
ಇತ್ತ ಸಂತ್ರಸ್ತೆ ಮನೆಗೆ ಹಿಂದಿರುಗಿ ಬಂದಾಗ ತಾಯಿಯ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ನಂತರ ಪೋಷಕರು ಪಟೇಲ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಸದ್ಯಕ್ಕೆ ಈ ಕುರಿತು ತನಿಖೆ ಶುರು ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.