ಬೆಂಗಳೂರು: ಶಾದಿ ಡಾಟ್ ಕಾಮ್‍ನಲ್ಲಿ ಆದ ಪರಿಚಯ ಯುವತಿಯನ್ನ ಬೀದಿಗೆ ತಂದು ನಿಲ್ಲಿಸಿದ ಪ್ರಸಂಗವೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಹೌದು. ಶಾದಿ ಡಾಟ್ ಕಾಮ್‍ನಲ್ಲಿ ಪರಿಚಯವಾಗಿದ್ದ ಸುಂದರವಾದ ಯುವತಿಯೊಬ್ಬಳ ಜೀವನವನ್ನ ಬೀದಿಗೆ ತಂದು ಬಿಟ್ಟಿದೆ. ಅನ್ಯಾಯಕ್ಕೊಳಗಾದ ಸಂತ್ರಸ್ತ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾಳೆ. ಮದುವೆ (Marriage) ಗೂ ಮುನ್ನ ಯುವತಿಗೆ ಅಂಗೈಯಲ್ಲಿ ಚಂದ್ರನನ್ನು ತೋರಿಸಿದ್ದ ಪ್ರಿಯಕರನ ವಿರುದ್ಧ ವಂಚನೆಗೊಳಗಾಗಿರೋ ಸಂತ್ರಸ್ತ ಯುವತಿ ಹೋರಾಟ ಮಾಡುವಂತಾಗಿದೆ.
ಶಾದಿ ಡಾಟ್ ಕಾಮ್ ಪ್ರೊಫೈಲ್ ಮೂಲಕ ಇಬ್ಬರ ಪರಿಚಯವಾಗಿದೆ. ಪರಿಚಯ ಪ್ರೇಮಾಂಕುರಕ್ಕೆ ವೇದಿಕೆಯಾಗಿದೆ. ಮದುವೆ ಆಗೋದಾಗಿ ಯುವತಿಯನ್ನು ನಂಬಿಸಿದ್ದಾನೆ. ಆ ಬಳಿಕ ಪೋಷಕರನ್ನ ಭೇಟಿ ಮಾಡಿಸೋದಾಗಿ ನೋಮನ್ ಶರೀಫ್, ಓಯೋ ರೂಮ್ (Oyo Room) ಗೆ ಕರೆಸಿಕೊಂಡಿದ್ದಾನೆ. ಆದರೆ ಈ ವೇಳೆ ಅಪ್ಪ-ಅಮ್ಮ ಬಂದಿಲ್ಲ ಹೇಗೂ ಹೋಟೆಲ್‍ಗೆ ಬಂದಿದ್ದೀವಲ್ಲ ಅಂತಾ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದನ್ನೂ ಓದಿ: 1 ಲಕ್ಷದ ಮೊಬೈಲ್‍ಗಾಗಿ ಡ್ಯಾಂನ 21 ಲಕ್ಷ ಲೀ. ನೀರನ್ನೇ ಖಾಲಿ ಮಾಡಿಸಿದ ಅಧಿಕಾರಿ!
ಇದಾದ ಬಳಿಕ ಮದುವೆಯಾಗುವುದಾಗಿ ನಂಬಿಸಿ ಅನೇಕ ಬಾರಿ ಶರೀಫ್ ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾನೆ. ಯುವತಿಯನ್ನ ಲೈಂಗಿಕವಾಗಿ ಬಳಸಿಕೊಂಡು ಆದ ಬಳಿಕ ಪ್ರೀತಿಸಿದ ಹುಡುಗಿಗೆ ಕೈಕೊಟ್ಟು ಬೇರೊಬ್ಬ ಯುವತಿಯ ಜೊತೆ ಮದುವೆ ಆಗಿದ್ದಾನೆ. ಸದ್ಯ ನೊಂದ ಯುವತಿಯಿಂದ ಡಿಜೆ ಹಳ್ಳಿ ಪೊಲೀಸ್ ಠಾಣೆ (DJ Halli Police Station) ಯಲ್ಲಿ ದೂರು ದಾಖಲೆ ಮಾಡಿದ್ದು ತನಿಖೆ ನಡೆಯುತ್ತಿದೆ.