-ಸತ್ಯ ತಿಳಿದು ಪೊಲೀಸರ ಮೊರೆ ಹೋದ ಪ್ರೇಯಸಿ
ಬೆಂಗಳೂರು: ಮೂರನೇ ಮದುವೆ ಆಗಬೇಕಿದ್ದ ಪ್ರೇಯಸಿಗೆ ವರ ಇಬ್ಬರನ್ನು ಮದುವೆ ಆಗಿರುವ ಸತ್ಯ ತಿಳಿದು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಕೋಲಾರ ಮೂಲದ ಯುವತಿ ಮೋಸ ಹೋಗಿದ್ದು, ಈಕೆ ಬೆಂಗಳೂರಿನ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲದೆ ಅದೇ ಗ್ರಾರ್ಮೆಂಟ್ಸ್ ನಿವಾಸಿ ಪ್ರವೀಣ್ ಜೊತೆ ಪ್ರೀತಿಯಲ್ಲಿ ಬಿದ್ದು ಚಿಕ್ಕ ವಯಸ್ಸಿನಲ್ಲಿಯೇ ತನ್ನ ಜೀವನವನ್ನು ಹಾಳು ಮಾಡಿಕೊಂಡಿದ್ದಾಳೆ. ಪ್ರವೀಣ್ ಮೊದಲ ಹೆಂಡತಿಗೆ ಒಂದು ಮಗು ಕೊಟ್ಟು ದೂರವಾಗಿದ್ದನು. ನಂತರ ಎರಡನೇಯ ಮದುವೆಯಾಗಿ ಬೇರೆಡೆಗೆ ಸಂಸಾರ ನಡೆಸುತ್ತಿದ್ದನು. ಆದರೆ ಈ ಬಗ್ಗೆ ಅರಿಯದ ಯುವತಿ ಪ್ರವೀಣ್‍ನನ್ನು ನಂಬಿ ಮೋಸ ಹೋಗಿದ್ದಾಳೆ.
Advertisement
Advertisement
ನನಗೆ ಯಾರೂ ಇಲ್ಲ, ನಾನೊಬ್ಬ ಅನಾಥ ಎಂದು ಪ್ರವೀಣ್, ಯುವತಿ ಬಳಿಕ ಸಿಂಪತಿ ಗಿಟ್ಟಿಸಿಕೊಂಡಿದ್ದನು. ಅಲ್ಲದೆ ನಿನ್ನನ್ನು ಪ್ರಾಣಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಆಕೆಯ ಹಿಂದೆ ಬಿದ್ದಿದ್ದನು. ಇದೇ ವೇಳೆ ಯುವತಿಗೆ ಬೇರೆಡೆ ಮದುವೆ ನಿಶ್ಚಯ ಆಗಿದ್ದನ್ನ ತಿಳಿದ ಪ್ರವೀಣ್, ಕೋಲಾರದಲ್ಲಿದ್ದ ಯುವತಿಯ ಪೋಷಕರ ಮನೆಗೆ ತೆರಳಿ ನಾನೇ ಆಕೆಯನ್ನ ಮದುವೆ ಆಗುತ್ತೇನೆ ಎಂದು ಹೇಳಿ ಪುಸಲಾಯಿಸಿ ಯುವತಿ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದನು.
Advertisement
Advertisement
ಬಳಿಕ ಮದುವೆ ಆಗೋಣ ಎಂದು ಯುವತಿ ಕೇಳಿದಾಗೆಲ್ಲಾ ಮುಂದಿನ ತಿಂಗಳು ಆಗೋಣ ಎಂದುಕೊಂಡೇ ಪ್ರವೀಣ್, ಆಕೆಯ ಜೊತೆ 2 ವರ್ಷ ಕಳೆದಿದ್ದಾನೆ. ಅಲ್ಲದೆ ಈ ಮೋಸಗಾರ ಎರಡು ಬಾರಿ ಯುವತಿಗೆ ಗರ್ಭಪಾತ ಕೂಡ ಮಾಡಿಸಿದ್ದಾನೆ. ಇದನ್ನು ತಿಳಿಯದೆ ಯುವತಿ ತಾನೇ ದುಡಿದ ತಿಂಗಳ ಸಂಬಳವನ್ನು ಆತನಿಗೆ ನೀಡುತ್ತಿದ್ದಳು. ಆದರೆ ಇದೀಗ ಯುವತಿಗೆ ಆತನ ನಿಜವಾದ ಬಣ್ಣ ತಿಳಿದಿದ್ದು ಜಗಳ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಇತ್ತ ಮೊದಲನೆ ಹೆಂಡತಿ ಕೂಡ ಇವನ ಸಹವಾಸ ಬೇಡ ನನಗೆ ಜೀವನಾಂಶ ಕೊಡಿಸಿ, ನಾನು ಇವನನ್ನ ಬಿಟ್ಟು ಹೋಗುತ್ತೇನೆ ಎಂದು ಪಟ್ಟುಹಿಡಿದಿದ್ದಾಳೆ. ಆದರೆ ಮೋಸ ಯುವತಿ ಹಿಂದು ಮುಂದು ಅರಿಯದೆ ಬಣ್ಣ ಬಣ್ಣದ ಮಾತನ್ನ ಕೇಳಿ ಮೋಸ ಹೋಗಿದ್ದರು ಕೂಡ ಪೊಲೀಸರು ಮೊದಲು ಕೇಸ್ ದಾಖಲಿಸದೇ ಕ್ಷುಲ್ಲಕ ನೆಪವೊಡ್ಡಿ ವಾಪಸ್ ಕಳಿಸಿದ್ದರು. ಬಳಿಕ ಯುವತಿಯ ಗೋಳಾಟ ನೋಡಲಾಗದೆ ನ್ಯಾಯ ಕೊಡಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]