ಕ್ಯಾನ್ಬೆರಾ: ನ್ಯೂಜಿಲೆಂಡ್‌ನ (New Zealand) ಪ್ರಯಾಣಿಕನೊಬ್ಬ ವಿಮಾನ (Flight) ಆಸ್ಟ್ರೇಲಿಯಾಗೆ (Australia) ಬಂದಿಳಿಯುತ್ತಿದ್ದಂತೆ ತನ್ನ ಸೀಟಿನಲ್ಲಿ ಕುಳಿತುಕೊಂಡೇ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ.
72 ವರ್ಷದ ಜೇಮ್ಸ್ ಹ್ಯೂಸ್ ಎಂಬ ವ್ಯಕ್ತಿ ಬಾಲಿಯಿಂದ ಬ್ರಿಸ್ಬೇನ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಈ ವಿಕೃತಿ ಮೆರೆದಿದ್ದು, ಬ್ರಿಸ್ಬೇನ್ ನ್ಯಾಯಾಲಯ (Court) 1 ವರ್ಷ ಸಾಧಾರಣ ಜೈಲು ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ಬಾಲಿವುಡ್ ನಲ್ಲಿ ಆಫರ್ ಬಂದಿದ್ದು ನಿಜ ಎಂದು ಒಪ್ಪಿಕೊಂಡ ರಿಷಬ್ ಶೆಟ್ಟಿ
Advertisement
Advertisement
ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಎಸಗಿದ ಬಳಿಕ, ಆಸ್ಟ್ರೇಲಿಯಾದ ಫೆಡರಲ್ ಪೊಲೀಸರು (Australian Federal Police) ಬ್ರಿಸ್ಬೇನ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲಿ ವ್ಯಕ್ತಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಯಾಣದ ವೇಳೆ ತಾನು ಸಣ್ಣ-ಸಣ್ಣ ಬಾಟಲಿಗಳ ವೈನ್ ಸೇವಿಸಿದ್ದಾನೆ. ವಿಮಾನ ಇಳಿಯುತ್ತಿದ್ದ ವೇಳೆ ವಿಸರ್ಜನೆ ಮಾಡಿದ್ದಾನೆ. ಇದರಿಂದ ವಿಮಾನ ಪ್ರಯಾಣ 6 ಗಂಟೆ ವಿಳಂಬವಾಗಿದೆ. ಹಾಗಾಗಿ ಕೃತ್ಯ ಎಸಗಿದ ವ್ಯಕ್ತಿಗೆ ನ್ಯಾಯಾಲಯ 1 ವರ್ಷಗಳ ಸಾಧಾರಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯರಿಂದ `ಧ್ಯಾನ’ ಭಂಗ- ಬಿ.ಸಿ ನಾಗೇಶ್ ತೀವ್ರ ವಾಗ್ದಾಳಿ
Advertisement
Advertisement
ಬಳಿಕ ಆಸ್ಟ್ರೇಲಿಯಾದ ಫೆಡರಲ್ ಪೋಲೀಸರು ( Australian Federal Police), ಇದು ಅಮಾನವೀಯಕರ ಘಟನೆ ಇಂತಹ ನಡವಳಿಕೆಯನ್ನು ಕ್ಷಮಿಸಲ್ಲ. ಕುಟುಂಬಸ್ಥರು ಹಾಗೂ ಇತರ ಪ್ರಯಾಣಿಕರೂ ಸುರಕ್ಷಿತವಾಗಿ ಪ್ರಯಾಣಿಸಬೇಕಾದ್ದರಿಂದ ಆಲ್ಕೋಹಾಲ್ ಸೇವಿಸುವ ಮುನ್ನ ಪ್ರಯಾಣಿಕರು ಜವಾಬ್ದಾರರಾಗಿರಬೇಕು ಎಂದು ಎಚ್ಚರಿಸಿದೆ.