ಮುಂಬೈ: ಮೂಢನಂಬಿಕೆಗಳ ವಿರುದ್ಧ ಸಂದೇಶವನ್ನು ಸಾರಲು ಮಹಾರಾಷ್ಟ್ರದ (Maharashtra) ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದ ನಿವಾಸಿಯೊಬ್ಬರು ಸ್ಮಶಾನದಲ್ಲಿ (Crematorium) ತಮ್ಮ ಜನ್ಮದಿನವನ್ನು (Birthday) ಆಚರಿಸಿಕೊಂಡರು.
54ನೇ ವರ್ಷಕ್ಕೆ ಕಾಲಿಟ್ಟ ಗೌತಮ್ ರತನ್ ಮೋರೆ ಅವರು ಮೊಹಾನೆ ಸ್ಮಶಾನದಲ್ಲಿ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಿದ್ದರು. ತಮ್ಮ ಹುಟ್ಟುಹಬ್ಬದ ಪಾರ್ಟಿಗೆ ಬಂದ ಅತಿಥಿಗಳಿಗೆ ಕೇಕ್ ಹಾಗೂ ಬಿರಿಯಾನಿಗಳನ್ನು ನೀಡಿ ಸತ್ಕರಿಸಿದರು. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸ್ಮಶಾನದಲ್ಲಿ ದೊಡ್ಡ ಬ್ಯಾನರ್‌ನ್ನು ಹಾಕಲಾಗಿದ್ದು, ಕೇಕ್‌ನ್ನು ಕತ್ತರಿಸುತ್ತಿರುವ ವೀಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಎಲ್ಲಾ ಮುಸ್ಲಿಮರನ್ನ ಕೊಂದು ಹಿಂದೂ ರಾಷ್ಟ್ರ ನಿರ್ಮಾಣ ಮಾಡಿ: ಖಾಲಿದ್ ಆಕ್ರೋಶ
Advertisement
Advertisement
ಸ್ಮಶಾನದಲ್ಲಿ ನಡೆದ ಗೌತಮ್ ರತನ್ ಮೋರೆಯ ಹುಟ್ಟುಹಬ್ಬದ ಪಾರ್ಟಿಯಲ್ಲಿ 40 ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು. ಗೌತಮ್ ಈ ಬಗ್ಗೆ ಮಾತನಾಡಿ, ಸಾಮಾನ್ಯವಾಗಿ ಸ್ಮಶಾನಗಳು ಅಂದರೆ ಜನರು ಭಯಪಡುತ್ತಾರೆ. ಆದರೆ ಅಂತಹ ಇತರ ಸ್ಥಳಗಳಿಗೆ ಸಂಬಂಧಿಸಿದ ದೆವ್ವಗಳು ಅಸ್ತಿತ್ವದಲ್ಲಿಲ್ಲ ಎಂಬ ಸಂದೇಶವನ್ನು ಜನರಿಗೆ ಕಳುಹಿಸಲು ಇಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಪಕ್ಷ ಬಿಡಲ್ಲ, ಭವಿಷ್ಯ ಬಿಜೆಪಿಯಲ್ಲೇ ಇದೆ: ಯತ್ನಾಳ್