ಡಿಎಲ್‌ ಇಲ್ಲದೇ 70 ವರ್ಷ ಕಾರು ಚಾಲನೆ – ಫಸ್ಟ್‌ ಟೈಂ ಪೊಲೀಸರಿಗೆ ಸಿಕ್ಕಿಬಿದ್ದ ವೃದ್ಧ!

Public TV
1 Min Read
car driver

ಲಂಡನ್:‌ ಚಾಲನ ಪರವಾನಗಿ (ಡಿಎಲ್‌) ಇಲ್ಲದೆಯೇ 70 ವರ್ಷಗಳ ಕಾಲ ಕಾನೂನು ಬಾಹಿರವಾಗಿ ವಾಹನ ಚಲಾಯಿಸಿಕೊಂಡಿದ್ದ ವ್ಯಕ್ತಿ ಮೊದಲ ಬಾರಿಗೆ ಪೊಲೀಸರಿಗೆ ಸಿಕ್ಕಿಬಿದ್ದಿರುವ ಪ್ರಸಂಗ ಇಂಗ್ಲೆಂಡ್‌ನ ಬುಲ್ವೆಲ್‌ನಲ್ಲಿ ನಡೆದಿದೆ.

83 ವಯಸ್ಸಿನ ವೃದ್ಧ 70 ವರ್ಷಗಳ ಕಾಲ ಡ್ರೈವಿಂಗ್‌ ಲೈಸೆನ್ಸ್‌ ಇಲ್ಲದೇ ಬ್ಲ್ಯೂ ಮಿನಿ ವಾಹನ ಚಲಾಯಿಸಿಕೊಂಡು ಇದ್ದರು. ಇವರನ್ನು ಮೊದಲ ಬಾರಿಗೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ, ತಾನು 12 ವಯಸ್ಸಿನ ಹುಡುಗನಾಗಿದ್ದಾಗಿನಿಂದಲೂ ವಾಹನ ಚಲಾಯಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲಸಿಕೆ ಕಡ್ಡಾಯ ನಿಯಮ ವಿರೋಧಿಸಿ ತೀವ್ರ ಪ್ರತಿಭಟನೆ – ರಹಸ್ಯ ಸ್ಥಳಕ್ಕೆ ಕೆನಡಾ ಪಿಎಂ ಸ್ಥಳಾಂತರ

car driving 1

70 ವರ್ಷಗಳ ಕಾಲ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಲಾಯಿಸಿರುವ ಇವರು ಇದುವರೆಗೆ ಯಾವುದೇ ಅಪಘಾತಕ್ಕೆ ಒಳಗಾಗಿಲ್ಲ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ವೃದ್ಧನನ್ನು ಇದುವರೆಗೂ ಪೊಲೀಸರು ತಪಾಸಣೆಗೆ ಒಳಪಡಿಸದಿರುವುದು ವಿಲಕ್ಷಣವಾಗಿದೆ.

ನಾಟಿಂಗ್‌ಹ್ಯಾಮ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಎನ್‌ಪಿಆರ್‌ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸ್ವಲ್ಪ ದೂರದ ಪ್ರಯಾಣಗಳಿದ್ದರೂ ಕ್ಯಾಮರಾ ಕಣ್ಣಿಗೆ ಬೀಳುವುದು ಗ್ಯಾರಂಟಿ. ಆದ್ದರಿಂದ ಚಾಲಕರು ದಾಖಲೆಗಳನ್ನು ಕ್ರಮಬದ್ಧವಾಗಿ ಹೊಂದಿರುವುದು ಮುಖ್ಯ ಎಂದು ಸಂಚಾರ ಪೊಲೀಸರು ಈಗಾಗಲೇ ಸಾಕಷ್ಟು ಬಾರಿ ಜನರಿಗೆ ಮನವರಿಕೆ ಮಾಡಿದ್ದಾರೆ. ಆದರೂ ಎಷ್ಟೋ ಜನ ನಿಯಮ ಉಲ್ಲಂಘಿಸುತ್ತಿದ್ದಾರೆ. ಇದನ್ನೂ ಓದಿ: ಇರಾಕ್ ಏರ್‌ಸ್ಟ್ರೈಕ್ – 6 ಐಸಿಸ್‌ ಉಗ್ರರ ಹತ್ಯೆ

London lockdown 1

83 ವರ್ಷದ ವೃದ್ಧ ಚಾಲಕನಿಗೆ ಯಾವ ಶಿಕ್ಷೆ ನೀಡಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *