Connect with us

International

ಬರಿಗೈಯ್ಯಲ್ಲೇ ಮೀನು ಹಿಡಿಯುತ್ತಾರೆ ಈ ವ್ಯಕ್ತಿ- ವಿಡಿಯೋ ನೋಡಿ

Published

on

ವಾಷಿಂಗ್ಟನ್: ಸಾಮಾನ್ಯವಾಗಿ ಮೀನು ಹಿಡಿಯಲು ಗಾಳ ಹಾಕಬೇಕು ಅಥವಾ ದೊಡ್ಡ ಬಲೆಗಳನ್ನ ಬಳಸಬೇಕು. ಆದ್ರೆ ವ್ಯಕ್ತಿಯೊಬ್ಬರು ಇದ್ಯಾವುದನ್ನೂ ಬಳಸದೇ ಬರಿಗೈಯ್ಯಲ್ಲೇ ಮೀನು ಹಿಡಿಯೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

ಅಮೆರಿಕದ ಅಲಬಾಮಾ ನಿವಾಸಿಯಾದ ರಾಬರ್ಟ್ ಅರ್ಲ್ ವುಡಾರ್ಡ್ ಈ ವಿಡಿಯವನ್ನು ಮೇ 18ರಂದು ಹಂಚಿಕೊಂಡಿದ್ದಾರೆ. ರಾರ್ಬಟ್ ತನ್ನ ಕೈಯ್ಯಲ್ಲಿ ಪುಟಾಣಿ ಮೀನೊಂದನ್ನು ಹಿಡಿದು ನೀರಿನ ಮೇಲೆ ಕೈಯ್ಯಾಡಿಸುತ್ತಾರೆ. ಅದನ್ನು ತಿನ್ನಲು ಬಂದ ದೊಡ್ಡ ಮೀನನ್ನ ಅದರ ಬಾಯಿ ಹಿಡಿದು ಕೆಲವೇ ಸೆಕೆಂಡ್‍ಗಳಲ್ಲಿ ಕೈಯ್ಯಲ್ಲೇ ಕ್ಯಾಚ್ ಹಿಡಿಯುತ್ತಾರೆ.

ರಾಬರ್ಟ್ ಈ ರೀತಿ ಮೀನು ಹಿಡಿದಿರುವುದು ಇದೇ ಮೊದಲೇನಲ್ಲ. ಅವರ ಇತರೆ ಯೂಟ್ಯೂಬ್ ವಿಡಿಯೋಗಳಲ್ಲೂ ಇದೇ ರೀತಿ ಬರಿಗೈಯ್ಯಲ್ಲೇ ಮೀನು ಹಿಡಿದಿರೋದನ್ನ ನೋಡಬಹುದು.

Click to comment

Leave a Reply

Your email address will not be published. Required fields are marked *