ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಗನೊಬ್ಬ ವಿಕಲಚೇತನ ತಾಯಿಯನ್ನು ಎತ್ತಿಕೊಂಡು ಮತಗಟ್ಟೆಗೆ ಬಂದು ವೋಟ್ ಮಾಡಿಸಿದ್ದಾರೆ.
ಪಶ್ಚಿಮ ಬಂಗಾಳದ ಮಾಲ್ಡಾ ಸೇರಿದಂತೆ 5 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಮಾಲ್ಡಾ ಮತಕ್ಷೇತ್ರ ವ್ಯಾಪ್ತಿಯ ಕೊಟ್ವಾಲಿಯಲ್ಲಿ ಯುವಕ ತಾಯಿಯನ್ನು ಹೊತ್ತು ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಕರೆ ತಂದಿದ್ದಾನೆ. ಇದನ್ನು ಓದಿ: ಮತದಾರರು ಸರತಿ ಸಾಲಲ್ಲಿ ನಿಲ್ಲಂಗಿಲ್ಲ-ಮತದಾರನಿಗೆ ಸಿಗ್ತಿದೆ ಪರಿಪೂರ್ಣ ಗೌರವ!
Advertisement
West Bengal: Man carries his 87-year mother to polling booth in Kotwali Primary Junior Basic School, in Malda #LokSabhaElections2019 pic.twitter.com/qYJ17Hj240
— ANI (@ANI) April 23, 2019
Advertisement
ಯುವಕ ತಾಯಿಯನ್ನು ಹೊತ್ತುಕೊಂಡು ಮತಗಟ್ಟೆಗೆ ಬಂದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆತನ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
Advertisement
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 18ರಂದು ನಡೆಸಿದ್ದ ಚುನಾವಣೆಯಲ್ಲಿ ಅಹಿತಕರ ಘಟನೆಗಳು ನಡೆದಿದ್ದವು. ರಾಯ್‍ಗಂಜ್ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮೊಹಮ್ಮದ್ ಸಲಿಂ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಗುಂಡಿನ ದಾಳಿ ನಡೆದಿತ್ತು. ಅಷ್ಟೇ ಕೆಲವು ಕಡೆಗಳಲ್ಲಿ ಗಲಾಟೆ, ಹಲ್ಲೆ ಹಾಗೂ ಬಲವಂತವಾಗಿ ಮತದಾನ ಮಾಡಿಸಲಾಗಿತ್ತು.
Advertisement
ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ಆರಂಭವಾಗಿದೆ. 13 ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 117 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 18 ಕೋಟಿ 85 ಲಕ್ಷ ಜನರು ಇಂದು 1,640 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
ಅಸ್ಸಾಂನ ಹೈಲಾಕಂಡಿ ಜಿಲ್ಲೆಯ ಸುರ್ಗಲ್ ಬಿಬಿ ಅವರು 102 ವರ್ಷದವರಾಗಿದ್ದು, 1950 ರಿಂದಲೂ ಯಾವುದೇ ಮತದಾವನ್ನು ತಪ್ಪಿಸಿಲ್ಲ. ಅಸ್ಸಾಂನಲ್ಲಿ ಇಂದು ಅವರು ಮತದಾನ ಮಾಡಲಿದ್ದಾರೆ.