ಬೆಂಗಳೂರು: ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ ಚಾಲಾಕಿ ಕಳ್ಳನೊಬ್ಬ ಪೇಡ ಖರೀದಿ ನೆಪದಲ್ಲಿ 15 ತುಪ್ಪವನ್ನೇ ಹೊತ್ತೊಯ್ದ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಕೆಂಗೇರಿ ಕೊಮ್ಮಘಟ್ಟ ನಂದಿನಿ ಪಾರ್ಲರ್ ನಲ್ಲಿ (Nandini Parlour) ಚಾಲಾಕಿ ಕಳ್ಳ ತನ್ನ ಕೈಚಳಕ ತೋರಿದ್ದಾನೆ. ಕಳ್ಳನ ಕರಾಮತ್ತು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಡೆದಿದ್ದೇನು..?: ನಂದಿನಿ ಪಾರ್ಲರ್ ಬಂದ ಚಾಲಾಕಿ, ಮನೆಯಲ್ಲಿ ಫಂಕ್ಷನ್ ಇದೆ. ಹೀಗಾಗಿ 15 ಕೆಜಿ ತುಪ್ಪ ಕೊಡಿ ಎಂದಿದ್ದಾನೆ. ಅದರಂತೆ ಅಂಗಡಿಯವರು 15 ಕೆ.ಜಿ ತುಪ್ಪವನ್ನು ಕೊಟ್ಟಿದ್ದಾರೆ. ನಂತರ ಏನು ಬೇಕು ಎಂದಿದ್ದಾರೆ ಆಗ, ಪೇಡ ಬೇಕು ಅಂತಾ ಚಾಲಾಕಿ ಕಳ್ಳ ಹೇಳಿದ್ದಾನೆ. ಇದನ್ನೂ ಓದಿ: KSRTC ಬಸ್ ಕಿಟಕಿಯಿಂದ ಉಗುಳೋಕೆ ಹೋಗಿ ಮಹಿಳೆಯ ತಲೆ ಲಾಕ್!
ಅಂಗಡಿಯವರು ಪೇಡ ಕೊಡಲೆಂದು ಅಂಗಡಿಯೊಳಗೆ ತಿರುಗಿದಾಗ ಖತರ್ನಾಕ್ ಕಳ್ಳ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇತ್ತ ಅಂಡಿಯವರು ಪೇಡ ಕೊಡಲೆಂದು ತಿರುಗಿದಾಗ ಗ್ರಾಹಕ ಜಾಗ ಖಾಲಿ ಮಾಡಿದ್ದನ್ನು ಕಂಡು ಗಾಬರಿಗೊಂಡಿದ್ದಾರೆ.
ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಗೆ ಮಾಲೀಕರು ದೂರು ನೀಡಿದ್ದಾರೆ. ದೂರು ಸ್ವೀಕರಿಸುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.