ಚಾಮರಾಜನಗರ: ಕುದಿಯುವ ಎಣ್ಣೆಯಲ್ಲಿ ಬರಿಗೈನಿಂದಲೇ ಕಜ್ಜಾಯ ತೆಗೆಯುವ ವಿಶಿಷ್ಟ ಆಚರಣೆಯೊಂದು ಜಿಲ್ಲೆಯ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷ ನಡೆದುಕೊಂಡು ಬಂದಿದೆ.
ಲೊಕ್ಕನಹಳ್ಳಿ ಗ್ರಾಮದ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಈ ಆಚರಣೆ ನಡೆಯುತ್ತದೆ. ಪ್ರತಿವರ್ಷವು ಬರುವ ಕೊನೆಯ ಕಾರ್ತಿಕ ಸೋಮವಾರದಂದು ಈ ವಿಶಿಷ್ಟ ಆಚರಣೆಯನ್ನು ಇಲ್ಲಿನ ಜನರು ಆಚರಿಸುತ್ತಾರೆ. ಸಿದ್ದಪ್ಪಾಜಿ ದೇವರ ಕಂಡಾಯ ಹೊತ್ತು ಮೆರವಣಿಗೆಯನ್ನು ಮಾಡಲಾಗುತ್ತೆ. ಈ ವೇಳೆ ದೇವರ ಕಂಡಾಯವನ್ನು ಹೊತ್ತುಕೊಂಡ ಅರ್ಚಕರು ದೇವಸ್ಥಾನದ ಆವರಣದಲ್ಲಿ ಇರಿಸಲಾದ ಕುದಿಯುವ ಎಣ್ಣೆಯಲ್ಲಿ ಬೇಯುತ್ತಿರುವ ಕಜ್ಜಾಯವನ್ನು ಬರಿಗೈಯಿಂದ ತೆಗಯುವ ಮೂಲಕ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
Advertisement
Advertisement
ಈ ಅಚ್ಚರಿಯನ್ನು ನೋಡಲು ಸುತ್ತಮುತ್ತಲ ಗ್ರಾಮಗಳ ಭಕ್ತರು ಸಿದ್ದಪ್ಪಾಜಿ ದೇವಸ್ಥಾನಕ್ಕೆ ಬರುತ್ತಾರೆ. ಈ ಆಚರಣೆ ಮಾಡುವಾಗ ಕುದಿಯುವ ಎಣ್ಣೆಗೆ ಕೈ ಹಾಕಿದರೂ ಯಾವುದೇ ರೀತಿಯ ಅಪಾಯವಾಗುವುದಿಲ್ಲ. ಸಿದ್ದಾಪ್ಪಾಜಿ ದೇವರ ಮಹಿಮೆಯಿಂದಲೇ ಅರ್ಚಕರಿಗೆ ಏನು ಆಗುತ್ತಿಲ್ಲ ಎನ್ನುವ ನಂಬಿಕೆ ಭಕ್ತರದ್ದು.
Advertisement
https://www.youtube.com/watch?v=CROI9OwWJDs
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv