ಭೋಪಾಲ್: ಮಹಿಳೆಯನ್ನು ಅಪಹರಿಸಿ ಸತತ 24 ದಿನಗಳ ಕಾಲ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
30 ವರ್ಷದ ಮಹಿಳೆಯನ್ನ ಭೋಪಾಲ್ ನಿಂದ ಕಿಡ್ನಾಪ್ ಮಾಡಿ, ಅಲ್ಲಿಂದ ಇಂದೋರ್ ಮತ್ತು ರಾಜಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿ ಆಕೆಯನ್ನ 2 ಲಕ್ಷ ರೂ. ಮಾರಾಟ ಮಾಡಿದ್ದು, ನಂತರ ಸತತ 24 ದಿನಗಳ ಕಾಲ ನಿರಂತರ ಅತ್ಯಾಚಾರ ಎಸಗಿದ್ದಾರೆ. ಸದ್ಯಕ್ಕೆ ಪೊಲೀಸರು ತನಿಖೆ ಮಾಡಿ ಮಹಿಳೆಯನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಸಂತ್ರಸ್ತೆ ಪತಿಯಿಂದ ವಿಚ್ಛೇದನ ಪಡೆದಿದ್ದು, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಸಂತ್ರಸ್ತೆಗೆ ಅಕ್ಟೋಬರ್ 28 ರಂದು ಅಪರಿಚಿತರೊಬ್ಬರು ಕರೆ ಮಾಡಿ ಸುಭಾಷ್ ಯಾದವ್ ಎಂದು ಹೇಳಿದ್ದಾರೆ. ಬಳಿಕ ತಿಂಗಳಿಗೆ 15 ಸಾವಿರ ವೇತನ ಸಿಗುವ ಕೆಲಸ ಕೊಡಿಸುವುದಾಗಿ ಹೇಳಿ ಭೇಟಿಯಾಗುವಂತೆ ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಯುವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ.
Advertisement
Advertisement
ಸಂತ್ರಸ್ತೆ ಕೆಲಸ ಸಿಗುತ್ತದೆಂದು ಭೋಪಾಲ್ ನ ಡಿಐಜಿ ಬಂಗಲೆ ಪ್ರದೇಶದಲ್ಲಿ ಅವರನ್ನು ಭೇಟಿಯಾಗಲು ಹೋಗಿದ್ದಾರೆ. ಅಲ್ಲಿ ವ್ಯಕ್ತಿಯೊಬ್ಬ ಆಕೆಯನ್ನ ಅಪಹರಿಸಿ ಇಂದೋರ್ ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಎರಡು ದಿನಗಳ ಕಾಲ ಉಳಿಸಿಕೊಂಡು ಅಲ್ಲಿಂದ ಅಕ್ಟೋಬರ್ 31ರಂದು ಆಕೆಯನ್ನು ಅಲ್ವಾರ್ ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ 2 ಲಕ್ಷ ರೂ.ಗೆ ರೋಹಿತಾಶ್ ಮತ್ತು ಭೋಲರಾಂ ಎಂಬವರಿಗೆ ಮಾರಾಟ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
Advertisement
ರೋಹಿತ್ ಮತ್ತು ಸುಭಾಷ್ ಹಣ ಹಂಚಿಕೊಂಡಿದ್ದಾರೆ. ಬಳಿಕ ನನ್ನನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ಭೋಲಾರಂ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ದಿನಕ್ಕೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಮಹಿಳೆ ಹೇಳಿದ್ದಾರೆ.
ಇತ್ತ ಮಹಿಳೆ ನಾಪತ್ತೆಯಾಗಿದ್ದಾಳೆ ಎಂದು ನವೆಂಬರ್ 11 ರಂದು ಕುಟುಂಬವರು ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆಯನ್ನು ಶುರು ಮಾಡಿದ್ದಾರೆ. ಆದರೆ ಸಂತ್ರಸ್ತೆ ಫೋನ್ ಸ್ವಿಚ್ ಆಫ್ ಆಗಿದೆ. ಬಳಿಕ 2-3 ನಿಮಿಷ ಫೋನ್ ಆನ್ ಆಗಿದೆ. ಈ ವೇಳೆ ಪೋಲಿಸರು ನಂಬರ್ ಟ್ರ್ಯಾಕ್ ಮಾಡಿದ್ದು, ಬಳಿಕ ಸಂತ್ರಸ್ತೆ ಇದ್ದ ಸ್ಥಳ ಗೊತ್ತಾಗಿದೆ.
ಕೂಡಲೇ ಪೊಲೀಸರು ಹೋಗಿ ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಅಲ್ವಾರ್ ನಿವಾಸಿಗಳಾದ ರೋಹಿತ್ ಮತ್ತು ಭೋಲರಾಂ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಅವರಿಗಾಗಿ ಬಲೆ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv