– ಬಡತನದಿಂದ ಬಳಲುತ್ತಿದ್ದ ಕುಟುಂಬದ ಕೈಹಿಡಿದ ಲಾಟರಿ
– ಸಾಲ ಪಡೆಯಲು ಹೋಗುತ್ತಿದ್ದ ವ್ಯಕ್ತಿ ಆದ ಕೋಟ್ಯಧಿಪತಿ
ತಿರುವನಂತಪುರಂ: ಹಣವಿಲ್ಲದೆ ಸಾಲ ಪಡೆಯಲು ಬ್ಯಾಂಕಿಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 12 ಕೋಟಿ ರೂ. ಲಾಟರಿ ಹೊಡೆದು ಕೋಟ್ಯಧಿಪತಿ ಆಗಿದ್ದಾರೆ.
ಕೇರಳದ ಕುರುಚಿಯಾ ರಾಜನ್ ಅವರಿಗೆ 12 ಕೋಟಿ ರೂ. ಲಾಟರಿ ಹೊಡೆದಿದೆ. ಹಿಂದೆ ಮೂರು ಬಾರಿ ಮಾಡಿದ್ದ ಸಾಲ ಇನ್ನೂ ತೀರಿಸಿರಲಿಲ್ಲ, ಆದರೆ ಹಣ ಅವಶ್ಯಕತೆ ಇದ್ದ ಕಾರಣಕ್ಕೆ ನಾಲ್ಕನೇ ಬಾರಿಗೆ ಬ್ಯಾಂಕಿನಲ್ಲಿ ಸಾಲ ಪಡೆಯಲು ರಾಜನ್ ಹೋಗುತ್ತಿದ್ದರು. ಆದರೆ ಬ್ಯಾಂಕಿಗೆ ಹೋಗುವ ದಾರಿಯಲ್ಲೇ ರಾಜನ್ ಕೋಟ್ಯಧಿಪತಿ ಆಗಿದ್ದಾರೆ.
Advertisement
Advertisement
ತಮ್ಮ ಮನೆಯ ನಿರ್ಮಾಣ ಕೆಲಸ ಅರ್ಧಕ್ಕೆ ನಿಂತಿದ್ದ ಕಾರಣಕ್ಕೆ ರಾಜನ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಅಲ್ಲದೆ ತಮ್ಮ ಮಗಳ ಮದುವೆಗೂ ಕೂಡ ಸಾಲ ಮಾಡಿದ್ದರು. ಆದರೆ ನಾಲ್ಕನೇ ಬಾರಿಗೆ ಬ್ಯಾಂಕಿನಲ್ಲಿ ಸಾಲ ಪಡೆಯಲು ಹೋಗುವ ಮುನ್ನ 300 ರೂ. ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದ್ದರು. ಈ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ.
Advertisement
Advertisement
ನಾನು ಯಾವಾಗಲೂ ಲಾಟರಿ ಖರೀದಿಸುತ್ತಿರುತ್ತೇನೆ ಎಂದು ನನ್ನ ಪತ್ನಿ ನನ್ನ ಜೊತೆ ಜಗಳವಾಡುತ್ತಿದ್ದಳು. ಅದಕ್ಕೆ ನಾನು ಲಾಟರಿ ಖರೀದಿಸಿದ್ದ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಆದರೆ ಮಂಗಳವಾರ ಬೆಳಗ್ಗೆ ಕುತೂಹಲದಿಂದ ಕಾಯುತ್ತಿದ್ದೆ. ಆಗ ನಾನು ಖರೀದಿಸಿದ ಲಾಟರಿ ಉಪಯೋಗಕ್ಕೆ ಬಂದಿದ್ದು, ಹಣವಿಲ್ಲದೆ ಸಾಲ ಪಡೆಯಲು ಹೋಗುತ್ತಿದ್ದ ನನಗೆ ಕೋಟಿಗಟ್ಟಲೆ ಹಣ ಸಿಕ್ಕಿದೆ ಎಂದರು.
ಲಾಟರಿಯಿಂದ ಹಣ ಬಂದಿದ್ದರಿಂದ ನನಗೆ ಸಿಕ್ಕಾಪಟ್ಟೆ ಸಂತೋಷವಾಗಿದೆ ಎಂದು ರಾಜನ್ ಹೀಳಿದ್ದರು. ಈ ಬಗ್ಗೆ ಕುಟುಂಬಸ್ಥರಿಗೆ ತಿಳುತ್ತಿದ್ದಂತೆ ಖುಷಿಯಾಗಿದೆ ಎಂದು ರಾಜನ್ ಅವರ ಕುಟುಂಬವೂ ಸಂತೋಷ ವ್ಯಕ್ತಪಡಿಸಿದ್ದಾರೆ.